ಹಣಕೋಣದ ವಿನಾಯಕ ನಾಯ್ಕ ಹತ್ಯೆ ಪ್ರಕರಣವನ್ನು ಮೂರು ದಿನದಲ್ಲಿ ಬೇದಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸರಿಗೆ ಪೊಲೀಸ್ ಮಹಾ ನಿರ್ದೇಶಕ ಅಲೋಕ ಮೋಹನ್ ಅವರು 1 ಲಕ್ಷ ರೂ ಬಹುಮಾನ ಘೋಷಿಸಿದ್ದಾರೆ.
ವಿನಾಯಕ ನಾಯ್ಕ ಹತ್ಯೆ ಪ್ರಕರಣ ಅತ್ಯಂತ ಕ್ಲಿಷ್ಟಕರವಾಗಿದ್ದು, ಯಾವುದೇ ಸುಳಿವು ಸಹ ಪೊಲೀಸರಿಗೆ ಸಿಕ್ಕಿರಲಿಲ್ಲ. ಸಾಕಷ್ಟು ಸವಾಲುಗಳ ನಡುವೆ ಎಸ್ಪಿ ಎಂ ನಾರಾಯಣ ಮೂರು ತಂಡ ರಚಿಸಿ ತನಿಖೆ ನಡೆಸಿದ್ದರು. ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರನ್ನು ರೈಲ್ವೆ ಪೊಲೀಸರ ನೆರವು ಪಡೆದು ಬಂಧಿಸಲಾಗಿದ್ದು, ಬಂಧಿತ ಇಬ್ಬರು 24 ವರ್ಷದ ಒಳಗಿನವರು. ಮೂರನೇ ವ್ಯಕ್ತಿ 31 ವರ್ಷದವನಾಗಿದ್ದು ಈ ಎಲ್ಲರೂ ಹೊರ ರಾಜ್ಯದವರೇ ಆಗಿದ್ದಾರೆ.
ಇದನ್ನೂ ಓದಿ: ದ್ವೇಷಕ್ಕೆ ಬಿತ್ತು ಎರಡು ಹೆಣ
ಕಷ್ಟಕರ ಪ್ರಕರಣವನ್ನು ಚಾಣಾಕ್ಷತನದಿಂದ ಬೇದಿಸಿದ ಪೊಲೀಸರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಹಿನ್ನಲೆ ಪೊಲೀಸ್ ಮಹಾ ನಿರ್ದೇಶಕ ಅಲೋಕ ಮೋಹನ್ ಅವರು 1 ಲಕ್ಷ ರೂ ಬಹುಮಾನ ಘೋಷಿಸಿದ್ದಾರೆ.