ತುರ್ತು ಸಮಯದಲ್ಲಿ ತ್ವರಿತವಾಗಿ ಆಂಬುಲೆನ್ಸ್, ಫೈರ್ ಹಾಗೂ ಪೊಲೀಸ್ ಸೇವೆ ಒದಗಿಸುತ್ತಿದ್ದ 112 ಸಹಾಯವಾಣಿ 2025ರ ಫೆಬ್ರವರಿ 4ರಂದು ಕೆಲಸ ಮಾಡುವುದಿಲ್ಲ. ಹೀಗಾಗಿ ಈ ದಿನ ಅಲ್ಲಿ ಫೋನ್ ಮಾಡಿ ಪ್ರಯೋಜವಿಲ್ಲ.
ತುರ್ತು ಸಮಯದಲ್ಲಿ ಜನರ ನೆರವಿಗೆ ಬರುವ 112 ಸೇವೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ. 112 ಸಹಾಯವಾಣಿಯ ಆಧುನೀಕರಣ ಹಿನ್ನಲೆ 2025ರ ಫೆ 4ರ ಮಧ್ಯಾಹ್ನ 3 ಗಂಟೆಯವರೆಗೆ 112 ಸಹಾಯವಾಣಿ ಸೇವೆ ಸ್ಥಗಿತವಾಗಲಿದೆ.
112 ಸಹಾಯವಾಣಿಗೆ ನಿತ್ಯವೂ ಲಕ್ಷಕ್ಕೂ ಅಧಿಕ ಫೋನ್ ಕರೆಗಳು ಸ್ವೀಕಾರವಾಗುತ್ತದೆ. ಮುಖ್ಯವಾಗಿ ಪೊಲೀಸ್ ಇಲಾಖೆಯ ನೆರವು ಯಾಚಿಸಿ ಅನೇಕರು ಫೋನ್ ಮಾಡುತ್ತಾರೆ. ಬೀದಿ ಜಗಳದಿಂದ ಹಿಡಿದು ಕೌಟುಂಬಿಕ ಸಮಸ್ಯೆಗಳನ್ನು ಸಹ 112 ಸಿಬ್ಬಂದಿ ಬಗೆಹರಿಸಿದ ಉದಾಹರಣೆಗಳಿವೆ.
ಇದರೊಂದಿಗೆ ತುರ್ತು ಆರೋಗ್ಯ ಸೇವೆ, ಆಂಬುಲೆನ್ಸ್ ಕಳುಹಿಸುವಿಕೆ, ಅಗ್ನಿ ಅವಘಡ ನಡೆದಾಗ ಅಗ್ನಿಶಾಮಕ ವಾಹನ ರವಾನೆಗೆ 112 ನೆರವಾಗಿದೆ. ಪ್ರಸ್ತುತ ಈ ಸೇವೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಕೆಲಸ ನಡೆಯುತ್ತಿದ್ದು, ಇದಕ್ಕಾಗಿ ಫೆ 4ರ ಬೆಳಗ್ಗೆ 12ಗಂಟೆಯಿoದ ಮಧ್ಯಾಹ್ನ 3 ಗಂಟೆಯವರೆಗೂ 112 ಸಹಾಯವಾಣಿ ಸ್ಥಗಿತವಾಗಲಿದೆ.
ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಜನ ಈ ದಿನ ತುರ್ತು ನೆರವಿಗಾಗಿ 112 ಬದಲು 08382-226222ಗೆ ಫೋನ್ ಮಾಡಿ.