ಯಲ್ಲಾಪುರ ಶಿರಸಿ ಸಂಪರ್ಕ ರಸ್ತೆಯಿಂದ ರವೀಂದ್ರನಗರಕ್ಕೆ ತೆರಳುವ ರಸ್ತೆ ಹದಗೆಟ್ಟಿದ್ದು, ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಇಲ್ಲಿ ಕಾಂಕ್ರೆಟ್ ರಸ್ತೆ ನಿರ್ಮಾಣದ ತಯಾರಿ ನಡೆಸಿದ್ದಾರೆ.
ನಗರೋತ್ಥಾನ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕೆ 20 ಲಕ್ಷ ರೂ ಮಂಜೂರಿಯಾಗಿದೆ. ಈ ಹಣದಲ್ಲಿ 200ಮೀಟರ್ ಕಾಂಕ್ರೆಟ್ ರಸ್ತೆ ಹಾಗೂ 100ಮೀ ಡಾಂಬರ್ ರಸ್ತೆ ನಿರ್ಮಾಣವಾಗಲಿದೆ.
ಶಿರಸಿ ಮುಖ್ಯರಸ್ತೆಯಿಂದ ಮುಂಡಗೋಡು ಕೂಡುರಸ್ತೆಯ ಆಂಜಿನೇಯ ದೇವಾಲಯದವರೆಗೂ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಬುಧವಾರ ಈ ಕಾಮಗಾರಿಗೆ ರವೀಂದ್ರನಗರ ವಾರ್ಡಿನ ಜನರೇ ಭೂಮಿ ಪೂಜೆ ಮಾಡಿದರು. ವಾರ್ಡಿಗೆ ರಸ್ತೆ ಮಂಜೂರಿ ಆಗಿರುವುದಕ್ಕೆ ಆ ಭಾಗದ ಜನ ಖುಷಿಯಿಂದ ಸಿಹಿ ಹಂಚಿದರು.
ಇದೇ ದಿನ ಸ್ಥಳಕ್ಕೆ ಯಂತ್ರೋಪಕರಣಗಳು ಬಂದಿದ್ದು, ರಸ್ತೆ ಕೆಲಸ ಸಹ ಶುರುವಾಯಿತು. ಪ ಪಂ ಸದಸ್ಯ ಸೋಮೇಶ್ವರ ನಾಯ್ಕ, ಪ್ರಮುಖರಾದ ಗಿರೀಶ್ ಬೋವಿ, ಬಾಬು ದೇಸಾಯಿ, ಕಾರ್ತಿಕ್ ನಾಯ್ಕ, ಮಾಲಾ ಬಾಳೆಹೊಸೂರ್, ಸಾವಿತ್ರಿ ದೈವಜ್ಞ, ಪುಷ್ಪ ಬಿನಗೇಕರ್ ಇತರರು ಇದ್ದರು.