ಹೊನ್ನಾವರ: ತಂದೆ ಕೊಂದ ಮಗನಿಗೆ ಕಾರವಾರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಕಾರವಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ಅವರು ತಮ್ಮ ಆದೇಶ ಪ್ರಕಟಿಸಿದರು.
ಹೊನ್ನಾವರ ಕರ್ಕಿಗ್ರಾಮದ ತೊಪ್ಪಲಕೇರಿಯಲ್ಲಿ ವಾಸವಾಗಿದ್ದ ಭರತ್ ಮೇಸ್ತಾ ಸದಾ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದರು. 2023ರ ಎಪ್ರಿಲ್ 21ರಂದು ರಾತ್ರಿ ತಡವಾಗಿ ಮನೆಗೆ ಬಂದ ಭರತ್ ಮೇಸ್ತಾರನ್ನು ಅವರ ತಂದೆ ಪಾಂಡುರAಗ ಮೇಸ್ತಾ ಪ್ರಶ್ನಿಸಿದ್ದರು. ಯಾವುದೇ ಕೆಲಸಕ್ಕೆ ಹೋಗದೇ ಅನಗತ್ಯವಾಗಿ ಸ್ನೇಹಿತರ ಜೊತೆ ತಿರುಗಾಡದಂತೆ ಬುದ್ದಿ ಹೇಳಿದ್ದರು.
ಇದನ್ನು ಸಹಿಸದ ಭರತ ಮೇಸ್ತಾ ತನ್ನ ತಂದೆ ಪಾಂಡುರAಗ ಮೇಸ್ತಾ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 23 ಸಾಕ್ಷಿ ಹಾಗೂ 83 ದಾಖಲೆಗಳ ಪರಿಶೀಲನೆ ನಡೆಸಿದ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಆರೋಪ ಸಾಭೀತಾದ ಹಿನ್ನಲೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 1 ಸಾವಿರ ರೂ ದಂಡವನ್ನು ವಿಧಿಸಿದೆ. ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ಅವರು ಸರ್ಕಾರದ ಪರ ವಾದಿಸಿದ್ದರು.