ಭಟ್ಕಳ ಜನತಾ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಮಾಡಿದ ಸಾಲ ತೀರಿಸಲಾಗದ ಕಾರಣ ದಾಮೋದರ ನಾಯ್ಕ ಸಾವನಪ್ಪಿದ್ದಾರೆ.
ಭಟ್ಕಳದ ಹಾಡುವಳ್ಳಿ ಹಲ್ಯಾಣಿಯ ಹಿರೇಬಿಳ್ಳುವಿನಲ್ಲಿ ದಾಮೋದರ ನಾಯ್ಕ (35) ವಾಸವಾಗಿದ್ದರು. ಮೂರು ವರ್ಷದ ಹಿಂದೆ ಅವರು ಭಟ್ಕಳ ಜನತಾ ಕೋ ಆಪರೇಟಿವ್ ಬ್ಯಾಂಕಿನಲ್ಲಿ 50 ಸಾವಿರ ರೂ ಸಾಲ ಮಾಡಿದ್ದರು. ಆ ಹಣವನ್ನು ಅವರು ಭೂ ಅಭಿವೃದ್ಧಿಗೆ ಬಳಸಿದ್ದರು. ಆದರೆ, ಫಸಲು ಅವರ ಕೈ ಹಿಡಿಯಲಿಲ್ಲ. ಸಾಕಷ್ಟು ಪ್ರಯತ್ನ ನಡೆಸಿದರೂ ಅವರಿಗೆ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ.
ಸಾಲ ತೀರಿಸಲಾಗದೇ ತಲೆಬಿಸಿಯಲ್ಲಿದ್ದ ದಾಮೋದರ ನಾಯ್ಕ ಫೆ 25ರ ಸಂಜೆಯಿAದ ಕಾಣೆಯಾಗಿದ್ದರು. ತಮ್ಮ ಜಮೀನಿನ ಪಕ್ಕದಲ್ಲಿರುವ ತೋಟದ ಬಾವಿಗೆ ಹಾರಿ ಅವರು ಜೀವ ಬಿಟ್ಟರು. ಫೆ 28ರ ಸಂಜೆ ಬಾವಿಯಲ್ಲಿ ಅವರ ಶವ ಕಾಣಿಸಿತು. ದಾಮೋದರ ನಾಯ್ಕ ಅವರ ತಂದೆ ಈರಪ್ಪ ನಾಯ್ಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.