`ಅರಣ್ಯ ಅತಿಕ್ರಮಣದಾರರಿಗೆ ಮೂರು ತಲೆಮಾರಿನ ದಾಖಲೆ ಕೇಳುತ್ತಿರುವ ವಿಷಯವಾಗಿ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವೆ’ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.
ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಗುರುವಾರ ಬೆಂಗಳೂರಿನಲ್ಲಿ ಕಾನೂನು ಸಚಿವರನ್ನು ಭೇಟಿ ಮಾಡಿದರು. ಈ ವೇಳೆ ಸಚಿವರು ಈ ಭರವಸೆ ನೀಡಿದರು. ರಾಜ್ಯಾದಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳು ಸಲ್ಲಿಸಿದ ಅರ್ಜಿಯ ಪುನರ್ ಪರಿಶೀಲನಾ ಪ್ರಕ್ರಿಯೆಯಲ್ಲಿ ವಿವಿಧ ಅರಣ್ಯ ಹಕ್ಕು ಸಮಿತಿಗಳು ವಯಕ್ತಿಕ ಮೂರು ತಲೆಮಾರಿನ ದಾಖಲೆಗೆಗಳನ್ನ ಅಪೇಕ್ಷಿಸಿ ಕಾನೂನುಬಾಹಿರವಾಗಿ ತಿಳುವಳಿಕೆ ಪತ್ರ ನೀಡುತ್ತಿರುವ ಬಗ್ಗೆ ರವೀಂದ್ರ ನಾಯ್ಕ ವಿವರಿಸಿದರು.
`1930ಕ್ಕಿಂತ ಹಿಂದಿನ ದಾಖಲೆಗಳನ್ನ ಸಾಗುವಳಿ ಹಕ್ಕಿಗೆ ಸಂಬoಧಿಸಿ ಅಪೇಕ್ಷಿಸುವದು ಸಮಂಜಸವಲ್ಲ. ಸ್ಥಳೀಯ ಸಂಸ್ಥೆ, ಸರ್ಕಾರ, ಇಲಾಖೆಯ ಅಸ್ತಿತ್ವ, ಸ್ವತಂತ್ರ ದೇಶದ ಕಾನೂನುಗಳು ಅಸ್ತಿತ್ವವಿಲ್ಲದ ಹಿಂದಿನ ದಾಖಲೆ ಒತ್ತಾಯಿಸುವದು ಕಾನೂನುಬಾಹಿರ’ ಎಂದವರು ಮನವರಿಕೆ ಮಾಡಿದರು. `ಕಾನೂನನ್ನು ತಪ್ಪಾಗಿ ಅಥೈಸಿ, ಕಾನೂನಿಗೆ ವ್ಯತಿರಿಕ್ತವಾಗಿ ವಯಕ್ತಿಕ ನಿರ್ದಿಷ್ಟ ದಾಖಲೆಗೆ ನೋಟೀಸ್ ಕೊಡುವ ನೀತಿಯನ್ನು ಹಿಂದಕ್ಕೆ ಪಡೆಯುಬೇಕು’ ಎಂದು ಒತ್ತಾಯಿಸಿದರು.