6

ಆನೆ ಬಂತು ಆನೆ.. ಇಲ್ಲಿಗೆ ಏಕೆ ಬಂತು?

ಯಲ್ಲಾಪುರದ ವಜ್ರಳ್ಳಿಯಲ್ಲಿ ಕಾಡು ಆನೆಗಳ ಉಪಟಳ ಶುರುವಾಗಿದೆ. ಕಾಡಿನಲ್ಲಿ ನೀರು-ಆಹಾರ ಕೊರತೆಯಿಂದಾಗಿ ಆನೆಗಳು ನಾಡಿಗೆ ಲಗ್ಗೆಯಿಟ್ಟಿವೆ.

ಕಿರವತ್ತಿ-ಮದನೂರು ಭಾಗದಲ್ಲಿ ಆನೆ ಹಾವಳಿ ಸಾಮಾನ್ಯವಾಗಿದ್ದವು. ಆದರೆ, ಅದು ಇದೀಗ ವಜ್ರಳ್ಳಿ ಕಡೆಗೂ ವಿಸ್ತರಿಸಿದೆ. ವಜ್ರಳ್ಳಿಯ ದರ್ಭೆಜಡ್ಡಿ ಗಣೇಶ ಗಾಂವ್ಕರ ಅವರ ತೋಟಕ್ಕೆ ಮೂರು ಆನೆಗಳು ಆಗಮಿಸಿದೆ. ಅಲ್ಲಿನ ಬಾಳೆ ಸೇರಿ ವಿವಿಧ ಬೆಳೆಗಳನ್ನು ಹಾಳು ಮಾಡಿವೆ.

ಈಗಾಗಲೇ ಚಿರತೆ, ನರಿ, ಮಂಗ, ಕಾಡುಕೋಣನ ಕಾಟಕ್ಕೆ ಆ ಭಾಗದ ಜನ ತತ್ತರಿಸಿದ್ದಾರೆ. ವನ್ಯಜೀವಿ ಹಾವಳಿಯಿಂದ ಫಸಲು ರಕ್ಷಿಸಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಇದೀಗ ಆನೆ ಸಹ ಬೀಡು ಬಿಟ್ಟಿದ್ದರಿಂದ ಇಲ್ಲಿನ ರೈತರು ಭವಿಷ್ಯದ ಚಿಂತೆಯಲ್ಲಿದ್ದಾರೆ.

ಜನ ವಸತಿ ಪ್ರದೇಶದ ಸಮೀಪವೇ ಆನೆ ಬಂದಿದ್ದರಿAದ ಜನರ ಭಯ ಇನ್ನಷ್ಟು ಹೆಚ್ಚಾಗಿದೆ. ಆರು ವರ್ಷದ ಹಿಂದೆ ಈ ಭಾಗದಲ್ಲಿ ಒಮ್ಮೆ ಆನೆಗಳ ಆಗಮನವಾಗಿತ್ತು. ಅದಾದ ನಂತರ ಇದೀಗ ಮೊದಲ ಬಾರಿ ಈ ಊರಿಗೆ ಆನೆ ಪ್ರವೇಶಿಸಿದ್ದು, ಜನರ ಆತಂಕ ಹೆಚ್ಚಾಗಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page