ಯಲ್ಲಾಪುರ: ಕಿರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ರಾಮಚಂದ್ರ ಮತ್ತು ಬಮ್ಮವ್ವ ಖಿಲಾರಿ ನರೆಗಾ ಕೂಲಿ ಮಾಡಿ ದುಡಿದ ಹಣದಲ್ಲಿ ಮಗನನ್ನು ಓದಿಸಿದ್ದು, ಆ ಹಣವನ್ನು ಸರಿಯಾಗಿ ಬಳಸಿಕೊಂಡ ಮಯೂರ ಖಿಲಾರಿ ಏಳು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ನರೇಗಾ ಕೂಲಿ ಹಣ ಉಳಸಿದ ದಂಪತಿ ಆ ಹಣದಲ್ಲಿಯೇ ಮಯೂರ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸದ ವೆಚ್ಚ ಸರಿದೂಗಿಸಿದ್ದಾರೆ. ಸಾಧಕ ವಿದ್ಯಾರ್ಥಿ ಮಯೂರ್ ಸಹ ರಜಾ ಅವಧಿಯಲ್ಲಿ ಊರಿಗೆ ಬಂದಾಗ ನರೆಗಾ ಕೂಲಿ ಕೆಲಸದಲ್ಲಿ ಭಾಗವಹಿಸುತ್ತಿದ್ದರು ಎಂಬುದು ಇನ್ನೊಂದು ವಿಶೇಷ. ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ 74ನೇ ಘಟಿಕೋತ್ಸದಲ್ಲಿ ಈ ಪದಕವನ್ನು ಮಯೂರ್ ಸ್ವೀಕರಿಸಿದರು.
ಇದನ್ನೂ ಓದಿ: ಒಂದಲ್ಲ.. ಎರಡಲ್ಲ.. ಏಳು ಬಂಗಾರ ಗೆದ್ದ ಹುಡುಗ!
ಕಳೆದ 3 ವರ್ಷದಲ್ಲಿ 196 ದಿನ ಕೂಲಿ ಕೆಲಸ ಮಾಡಿದ ಈ ಕುಟುಂಬದವರು ಒಟ್ಟು 62403 ರೂಪಾಯಿ ಪಡೆದಿದ್ದಾರೆ. ಅದೇ ಹಣವನ್ನು ಬಳಸಿ ಮಯೂರ ಸ್ನಾತಕೋತ್ತರ ವ್ಯಾಸಾಂಗ ಮುಗಿಸಿದ್ದು, ಈ ಸಾಧನೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.
ಮಯೂರ ಖಿಲಾರಿ ಚಿನ್ನದ ಪದಕ ಸ್ವೀಕರಿಸಿದ ವಿಡಿಯೋ ಇಲ್ಲಿ ನೋಡಿ..