ರಾಷ್ಟ್ರೀಯ ಹೆದ್ದಾರಿ ಮದ್ಯಭಾಗದಿಂದ 45ಮೀ ದೂರದವರೆಗೆ ಯಾವುದೇ ಕಟ್ಟಡ ನಿರ್ಮಿಸುವ ಹಾಗಿಲ್ಲ ಎಂಬುದು ನಿಯಮ. ಆದರೆ, ಕಾರವಾರ ಕ್ಷೇತ್ರ ಶಾಸಕ ಸತೀಶ್ ಸೈಲ್ ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ ಮೇಲ್ಬಾಗ ಹಾದು ಹೋಗಿರುವ ಮೇಲ್ಸೇತುವೆ ಅಡಿಭಾಗ ವಾಣಿಜ್ಯ ಮಳಿಗೆ ನಿರ್ಮಿಸುವ ಬಗ್ಗೆ ಮಾತನಾಡಿದ್ದಾರೆ!
ಈ ವಿಚಾರದ ಬಗ್ಗೆ ಶಾಸಕರು ಹೇಳಿದ್ದು ಇದೇ ಮೊದಲಲ್ಲ. ಮೊದಲ ಬಾರಿ ಶಾಸಕರಾಗಿದ್ದ ಅವಧಿಯಲ್ಲಿ ಸಹ ಈ ಯೋಜನೆಯನ್ನು ಅವರು ಸಾರ್ವಜನಿಕರ ಎದುರು ತೆರೆದಿಟ್ಟಿದ್ದರು. ಹೆದ್ದಾರಿ ಅಗಲೀಕರಣ ಬೇಕು-ಬೇಡ ಎಂಬ ವಿಷಯದ ಬಗ್ಗೆ ಹೋರಾಟ ನಡೆದಾಗ ಕೇಂದ್ರ ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್ ಕಾರವಾರಕ್ಕೆ ಬಂದಾಗ ಸಹ ಇಲ್ಲಿನ ಜನಪ್ರತಿನಿಧಿಗಳು ಇದೇ ಬೇಡಿಕೆ ಇಟ್ಟಿದ್ದರು. ಆ ವೇಳೆ ಕೇಂದ್ರ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರು ಕಾರವಾರದಿಂದ ಭಟ್ಕಳದವರೆಗೆ ಸಂಚರಿಸಿ ಜನರ ಅಹವಾಲು ಆಲಿಸಿದ್ದು, ಕಾರವಾರ ನಗರಸಭೆ ಅಧ್ಯಕ್ಷೆಯಾಗಿದ್ದ ಲೀಲಾಬಾಯಿ ಠಾಣೆಕರ್ ಅವರು ನಗರದಲ್ಲಿ ಮೇಲ್ಸೆತುವೆಗೆ ಹಕ್ಕೊತ್ತಾಯ ಮಾಡಿದ್ದರು. ಸೇತುವೆ ಅಡಿಭಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುವ ಬಗ್ಗೆ ಕೇಂದ್ರ ಸಚಿವರಿಗೂ ಮನವಿ ಸಲ್ಲಿಸಿದ್ದರು. ಆ ದಿನಗಳಿಂದಲೂ ಸೇತುವೆ ಕೆಳಗೆ ಅಂಗಡಿಗಳ ನಿರ್ಮಾಣ ಚರ್ಚಿತ ವಿಷಯವೇ ಆಗಿದೆ.
ಆದರೆ, ಅತ್ಯಂತ ಅಪಾಯಕಾರಿ ಹಾಗೂ ಕಾನೂನುಬಾಹಿರ ಕೆಲಸ ನಿರ್ಮಾಣಕ್ಕೆ ಕೇಂದ್ರದಿoದ ಯಾವುದೇ ಅನುಮತಿ ದೊರೆತಿರಲಿಲ್ಲ. ಅದಾಗಿಯೂ ಆ ಯೋಚನೆಯನ್ನು ತಲೆಯೊಳಗೆ ಹಾಗೇ ಇರಿಸಿಕೊಂಡಿದ್ದ ಶಾಸಕ ಸತೀಶ್ ಸೈಲ್ ಇದೀಗ ಮತ್ತೆ ಪ್ಲೆöÊ ಓವರ್ ಕೆಳಗೆ ಅಂಗಡಿಗಳನ್ನು ನಿರ್ಮಿಸಿ ಅದನ್ನು ಬಾಡಿಗೆ ಕೊಡುವ ವಿಚಾರ ಮುಂದುವರೆಸಿದ್ದಾರೆ. ಕಾರವಾರ ಕಡಲತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಾಗಿ ಮಾತನಾಡಿದ ಸತೀಶ್ ಸೈಲ್ `ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ ಪ್ಲೆ ಓವರ್ ಅಡಿಭಾಗ ಸಣ್ಣ ಅಂಗಡಿಗಳನ್ನು ನಿರ್ಮಾಣ ಮಾಡಲಾಗುವುದು. ಅದರ ಮೂಲಕ ಸ್ಥಳೀಯರಿಗೆ ಸ್ವಯಂ ಉದ್ಯೋಗ ಕಲ್ಪಿಸಿ ಆರ್ಥಿಕ ಸಬಲರನ್ನಾಗಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ.
ಇಂಥ ಯೋಜನೆ ದೇಶದ ಯಾವ ಭಾಗದಲ್ಲಿ ಸಹ ಇಲ್ಲ. ಹೀಗಾಗಿ ಅವರು ಹೇಳಿದಂತೆ ಮಾಡಿದರೆ ಹೆದ್ದಾರಿ ಮೇಲ್ಸೇತುವೆ ಅಡಿಭಾಗದಲ್ಲಿ ಅಂಗಡಿ ನಿರ್ಮಾಣ ಮಾಡಿದ ಮೊದಲ ಊರು ಎಂಬ ಹೆಗ್ಗಳಿಕೆಗೆ ಕಾರವಾರ ಪಾತ್ರವಾಗಲಿದೆ.