ದಾಂಡೇಲಿ ಕೋಗಿಲಬನದಲ್ಲಿನ ಇಬ್ರಾಹಿಂ ಖಾದ್ರಿ ಹಾಗೂ ಸಾಧಿಕ್ ದಸ್ತಗೀರ್ ಎಂಬಾತರ ನಡುವೆ ಹೊಡೆದಾಟ ನಡೆದಿದೆ.
ಈ ಹೊಡೆದಾಟದಲ್ಲಿ ಕೋಗಿಲಬನದ ಇಬ್ರಾಹಿಂ ಖಾದ್ರಿ ಖಾನ್ ಕೋಳೂರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರಿಬ್ಬರ ಹೊಡೆದಾಟಕ್ಕೆ ಕಾರಣ ಗೊತ್ತಾಗಿಲ್ಲ. ಸಾಧಿಕ್ ದಸ್ತಗೀರ್ ದೊಣ್ಣೆ ಹಿಡಿದು ಕೂಗಾಡಿದ ವಿಡಿಯೋ ವೈರಲ್ ಆಗಿದೆ. ಕಟ್ಟಿಗೆಯಿಂದ ತಲೆಗೆ ಹೊಡೆದಿರುವುದಾಗಿ ಇಬ್ರಾಹಿಂ ಖಾದ್ರಿ ಖಾನ್ ಕೋಳೂರು ಅವರು ಆರೋಪಿಸಿದ್ದಾರೆ.