ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಡುತ್ತಿರುವ ರವೀಂದ್ರ ನಾಯ್ಕ ಅವರಿಗೆ ರಂಬಾಪುರಿ ವೀರಸೋಮೇಶ್ವರ ಸ್ವಾಮೀಜಿ ಸನ್ಮಾನಿಸಿದ್ದಾರೆ.
ಗದಗ ಜಿಲ್ಲೆಯ ರೋಣಾ ತಾಲೂಕಿನ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಅಬ್ಬಿಗೇರಿಯಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ನಡೆಯುತ್ತಿದೆ. ಈ ವೇದಿಕೆಯಲ್ಲಿ ರವೀಂದ್ರ ನಾಯ್ಕ ಗೌರವ ಸ್ವೀಕರಿಸಿದರು. ಅರಣ್ಯ ಭೂಮಿ ಹಕ್ಕು ಮತ್ತು ಅವೈಜ್ಞಾನಿಕ ಕರಡು ಕಸ್ತೂರಿರಂಗನ್ ವರದಿಯ ಕುರಿತು ಜಾಗೃತಿಗೊಳಿಸುತ್ತಿರುವ ಕಾರ್ಯಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧ ಕಡೆ ಅತಿಕ್ರಮಣದಾರರ ಸಭೆ
ತಂಡಾಗುoಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಳ್ಳೆ ಗ್ರಾಮದ ಸಂಭಾಗಣದಲ್ಲಿ ಅಕ್ಟೋಬರ್ 14 ಸಾಯಂಕಾಲ 3 ಗಂಟೆಗೆ ನಿಲ್ಕುಂದ, ಹೆಗ್ಗರಣಿ ಮತ್ತು ತಂಡಾಗು0ಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯ ಅತಿಕ್ರಮಣದಾರರ ಸಭೆ ಕರೆಯಲಾಗಿದೆ. ಅಕ್ಟೊಬರ್ 15ರಂದು ಬೆಳಗ್ಗೆ 10 ಗಂಟೆಗೆ ಯಲ್ಲಾಪುರದ ವೆಂಕಟರಮಣ ದೇವಸ್ಥಾನದಲ್ಲಿ `ಬೆಂಗಳೂರು ಚಲೋ’ ವಿಷಯವಾಗಿ ಅತಿಕ್ರಮಣದಾರರ ಸಭೆ ನಡೆಯಲಿದೆ. ನೋಂದಾಯಿತ ಸದಸ್ಯರಿಗೆ ಜಿಪಿಎಸ್ ಮೇಲ್ಮನವಿ ಸ್ವೀಕೃತಿ ಪ್ರತಿ, ಗುರುತಿನ ಪತ್ರ ವಿತರಣೆ ಹಾಗೂ ಮುಂದಿನ ಹೋರಾಟದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.