ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಸಭೆಗೆ ಅಧಿಕಾರಿಗಳನ್ನು ಬಿಡುವ ಗಡಬಿಡಿಯಲ್ಲಿ ಅರಣ್ಯ ಇಲಾಖೆ ಚಾಲಕ ಜೀಪನ್ನು ಚರಂಡಿಗೆ ಬೀಳಿಸಿದರು. ಇದನ್ನು ನೋಡಿದ ಇತರೆ ಸರ್ಕಾರಿ ವಾಹನ ಚಾಲಕರು ಒಟ್ಟಾಗಿ ಜೀಪನ್ನು ಮೇಲೆತ್ತಿದರು.
ಸೋಮವಾರ ಕಾರವಾರದಲ್ಲಿ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅಧಿಕಾರಿಗಳ ಸಭೆ ನಡೆಸಿದ್ದರು. ಈ ಸಭೆಗೆ ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಿದ್ದು, ಅರಣ್ಯ ಇಲಾಖೆ ಅಧಿಕಾರಿಯೊಬ್ಬರನ್ನು ಆ ಕಾರು ಕರೆತಂದಿತ್ತು. ಅಧಿಕಾರಿ ಬಹುಬೇಗ ಸಭೆಗೆ ತೆರಳಲು ಸೂಚಿಸಿದಾಗ ಚಾಲಕ ವಾಹನದ ವೇಗ ಹೆಚ್ಚಿಸಿದ್ದು, ಅರಣ್ಯ ಇಲಾಖೆ ಕಚೇರಿ ಎದುರಿನ ಗುಂಡಿಯಲ್ಲಿ ಆ ಜೀಪು ಇಳಿಯಿತು.
ಅಲ್ಲಿನ ಒಳಚರಂಡಿಗೆ ಸ್ಲಾಬ್ ಇಲ್ಲದ ಕಾರಣ ಕಾರು ಗುಂಡಿಯೊಳಗೆ ಸಿಲುಕಿಕೊಂಡಿತು. ಇದನ್ನು ನೋಡದ ಬೇರೆ ಬೇರೆ ಇಲಾಖೆ ವಾಹನ ಚಾಲಕರು ಒಂದಾದರು. ಗುಂಡಿಗೆ ಬಿದ್ದ ಕಾರನ್ನು ತಮ್ಮ ತೋಳ್ಬಲದಿಂದಲೇ ಮೇಲೆತ್ತಿದರು.