ತದಡಿ ಬಂದರಿನ ಮೇಲೆ ಆಕ್ರಮಣ ನಡೆಸಲು ಸಜ್ಜಾಗಿದ್ದ ಆಗಂತುಕರನ್ನು ಕರಾವಳಿ ಪೊಲೀಸ್ ಪಡೆಯವರು ಸೆದೆಬಡಿದಿದ್ದಾರೆ. ಆದರೆ, ಇಲ್ಲಿ ಸಿಕ್ಕಿಬಿದ್ದ ಆಗಂತುಕರು ಸಹ ಪೊಲೀಸರೇ ಆಗಿದ್ದಾರೆ!
ಪೊಲೀಸರ ಕಾರ್ಯಕ್ಷಮತೆ ಪರೀಕ್ಷೆಗಾಗಿ ಕರಾವಳಿ ಭಾಗದಲ್ಲಿ ಆಗಾಗ ಸಾಗರ ಕವಚ ಎಂಬ ಅಣಕು ಕಾರ್ಯಾಚರಣೆ ನಡೆಯುತ್ತದೆ. ಪೊಲೀಸರೇ ಕಳ್ಳರ ವೇಷ ಧರಿಸಿ ಆಕ್ರಮಣ ನಡೆಸುತ್ತಾರೆ. ಆ ಆಕ್ರಮಣ ತಡೆಯುವುದು ಕರ್ತವ್ಯನಿರತ ಪೊಲೀಸರ ಕೆಲಸ. ಮಂಗಳವಾರದಿoದ ಈ ಅಣಕು ಕಾರ್ಯಾಚರಣೆ ಶುರುವಾಗಿದ್ದು, ಮೊದಲ ದಿನವೇ ಬಂದರು ಮೇಲೆ ದಂಡೆತ್ತಿ ಬಂದ `ಕಳ್ಳ ಪೊಲೀಸರು’ ಸಿಕ್ಕಿ ಬಿದ್ದಿದ್ದಾರೆ!
ಗಂಗಾವಳಿ ಸಮೀಪದ ಸಮುದ್ರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಾಣಿಸಿದ ಬೋಟನ್ನು ಪೊಲೀಸರು ವಶಕ್ಕೆಪಡೆದರು. ಆಗ, ಅದರಲ್ಲಿ ನೌಕಾಪಡೆಯ `ರೆಡ್ ಪೋರ್ಸ’ ಎಂಬ ಹೆಸರಿನ ನಕಲಿ ಆಗಂತುಕರು ಕಾಣಿಸಿದರು. ಕೂಡಲೇ ಅವರೆಲ್ಲರನ್ನು ಪೊಲೀಸರು ಹಿಡಿದರು. ಸಿಕ್ಕಿಬಿದ್ದವರನ್ನು ತದಡಿ ಬಂದರಿಗೆ ತರಲಾಯಿತು. ಎಲ್ಲಾ ಬಗೆಯ ಕಾನೂನು ಪ್ರಕ್ರಿಯೆ ಮುಗಿಸಿ ಅವರನ್ನು ಬಿಡುಗಡೆ ಮಾಡಲಾಯಿತು.
ಕರಾವಳಿ ಕವಾಲು ಪಡೆಯ ಪಿಐ ಸಂಪತ್ ಇ ಸಿ ಸಮುದ್ರ ಗಸ್ತು ತಿರುಗಿದರು. ಎಎಸ್ಐ ಮಂಜುನಾಥ ಪಟಗಾರ, ಲಕ್ಷಿö್ಮÃಶ ,ಪ್ರದೀಪ ನಾಯ್ಕ, ದಿನೇಶ ನಾಯ್ಕ, ಬೋಟಿನ ಕ್ಯಾಪ್ಟನ್ ಆನಂದು ಗಾಂವಕರ, ಅಸ್ಟಿಂಟ್ ಬೋಟ್ ಕ್ಯಾಪ್ಟನ್ ಶ್ರೀನಾಸ ದುರ್ಗೇಕರ, ಸಂಜೀವ ನಾಯಕ, ಎಲ್ ಎಮ್ ಎಲ್ ಸಂತೋಷ ಹರಿಕಂತ್ರ ಕಲಾಸಿ ಸೇರಿ 9 ಜನ ನಕಲಿ ಆಗಂತುಕರನ್ನು ಹಿಡಿದರು.