ಮoಗಳೂರಿನಿoದ ಗೋವಾಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಹೊನ್ನಾವರದಲ್ಲಿ ಪಲ್ಟಿಯಾಗಿದೆ. ಟ್ಯಾಂಕರ್ ಕ್ಯಾಬೀನಿನಲ್ಲಿದ್ದ ಚಾಲಕ ಹಾಗೂ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.
ಹೊನ್ನಾವರದ ಕಾಸರಕೋಡಿನ ರೋಷನ್ ಮೊಹಲ್ಲಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಡಿವೈಡರ್’ಗೆ ಗುದ್ದಿದೆ. ಎಚ್ಪಿ ಕಂಪನಿಯ ಟ್ಯಾಂಕರ್ ಇದಾಗಿದ್ದು, ಗ್ಯಾಸ್ ತುಂಬಿಕೊ0ಡು ಸಾಗುತ್ತಿತ್ತು. ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ `ಗ್ಯಾಸ್ ಸೋರಿಕೆ ಆಗಿಲ್ಲ’ ಎಂದು ಸ್ಪಷ್ಠಪಡಿಸಿದರು. ಹೀಗಾಗಿ ಜನರ ಆತಂಕ ದೂರವಾಯಿತು. ಪೊಲೀಸರು ಸಾಕಷ್ಟು ಮುನ್ನಚ್ಚರಿಕೆವಹಿಸಿದರು. ಅಪಘಾತ ನೋಡಿದ ಇತರೆ ವಾಹನ ಸವಾರರು ಹೆದ್ದಾರಿಯಲ್ಲಿ ತಮ್ಮ ವಾಹನ ನಿಲ್ಲಿಸುತ್ತಿದ್ದು, ಪೊಲೀಸರು ಅವರನ್ನು ಮುಂದೆ ಕಳುಹಿಸಿದರು. ಆ ಮೂಲಕ ಸಂಚಾರ ದಟ್ಟಣೆ ಆಗದಂತೆ ನೋಡಿಕೊಂಡರು.