ದಾಂಡೇಲಿ: ಧಾರವಾಡದಿಂದ ದಾಂಡೇಲಿಗೆ ಹೊರಟ ಬಸ್ಸಿನಲ್ಲಿದ್ದ ಪುಂಡಲಿಕ ರಾಯಪ್ಪ ಚಂದರಗಿ (58) ಬಸ್ಸಿನೊಳಗೆ ಸಾವನಪ್ಪಿದ್ದಾರೆ.
ಜೊಯಿಡಾದ ಹಿಂದೂಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ದ್ವಿತೀಯ ದರ್ಜೆ ಸಹಾಯಕರಾಗಿದ್ದ ಅವರು ನ 1ರಂದು ಧಾರವಾಡದಿಂದ ಕರ್ತವ್ಯಕ್ಕೆ ಹೊರಟಿದ್ದರು. ಬಸ್ಸು ಕೊನೆಯ ನಿಲ್ದಾಣ ದಾಂಡೇಲಿ ತಲುಪಿದರೂ ಅವರು ಬಸ್ಸಿನಿಂದ ಇಳಿಯಲಿಲ್ಲ.
ಅವರು ನಿದ್ರೆ ಮಾಡಿರಬಹುದು ಎಂದು ಭಾವಿಸಿ ಬಸ್ಸಿನಲ್ಲಿದ್ದ ಇತರೆ ಪ್ರಯಾಣಿಕರು ಎಬ್ಬಿಸುವ ಪ್ರಯತ್ನ ಮಾಡಿದರು. ಆದರೂ ಎಚ್ಚರಗೊಳ್ಳದ ಕಾರಣ ನಿರ್ವಾಹಕರಿಗೆ ಮಾಹಿತಿ ನೀಡಿದರು. ಬಸ್ಸಿನ ನಿರ್ವಾಹಕರು ಆಂಬುಲೆನ್ಸ ಕರೆಯಿಸಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಪರೀಕ್ಷಿಸಿದ ವೈದ್ಯರು ಪುಂಡಲಿಕ ಚಂದರಗಿ ಸಾವನಪ್ಪಿರುವ ಬಗ್ಗೆ ಘೋಷಿಸಿದರು. ಪುಂಡಲಿಕ ಅವರು ಹೃದಯಘಾತದಿಂದ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅವರ ಪತ್ನಿ ರೇಣುಕಾ ಪೊಲೀಸ್ ದೂರು ದಾಖಲಿಸಿ ಶವ ಪಡೆದರು.
`ಹೃದಯದ ಬಗ್ಗೆ ಇರಲಿ ಕಾಳಜಿ. ಇದು ನಮ್ಮ ಕಳಕಳಿ’