ನೆಂಟರಮನೆಯ ಕಾರ್ಯಕ್ರಮ ಮುಗಿಸಿ ನಡೆದು ಬರುತ್ತಿದ್ದ ಲಕ್ಷ್ಮಿ ಖಾರ್ವಿ ಹಠಾತ್ ಆಗಿ ಕುಸಿದು ಬಿದ್ದು ಸಾವನಪ್ಪಿದ್ದಾರೆ.
ಅಂಕೋಲಾ ತಾಲೂಕಿನ ಬೆಳಂಬಾರ ಉತ್ತರಖಾರ್ವಿವಾಡದಲ್ಲಿ ಲಕ್ಷ್ಮಿ ಚಂದ್ರಹಾಸ ಖಾರ್ವಿ (42) ವಾಸವಾಗಿದ್ದರು. ಮನೆ ಕೆಲಸ ಮಾಡಿಕೊಂಡಿದ್ದ ಅವರು ಆರೋಗ್ಯವಾಗಿಯೇ ಇದ್ದರು. ಫೆ 21ರಂದು ಸಂಬoಧಿ ರಾಹುಲ್ ನಾರಾಯಣ ಖಾರ್ವಿ ಅವರ ಮನೆಗೆ ಹೋಗಿದ್ದರು.
ಅಲ್ಲಿ ಕಾರ್ಯಕ್ರಮ ಮುಗಿದ ನಂತರ ಮಧ್ಯಾಹ್ನ 3.30ರ ವೇಳೆಗೆ ಮನೆಗೆ ಮರಳುತ್ತಿದ್ದರು. ನಡೆದು ಬರುತ್ತಿದ್ದ ಲಕ್ಷಿö್ಮ ಖಾರ್ವಿ ಅವರು ಬೆಳಂಬಾರ ಬಳಿಯ ಮದ್ಯಖಾರ್ವಿವಾಡದ ಮೋಹನ ಕಿರಾಣಿ ಅಂಗಡಿ ಬಳಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥರಾದರು. ತಕ್ಷಣ ರಿಕ್ಷಾದ ಮೂಲಕ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಪರೀಕ್ಷಿಸಿದ ವೈದ್ಯರು `ಲಕ್ಷ್ಮಿ ಖಾರ್ವಿ ಇನ್ನಿಲ್ಲ’ ಎಂಬ ಸತ್ಯ ಮುಂದಿಟ್ಟರು. ತಾಯಿ ನಿಧನದ ಬಗ್ಗೆ ಅಂಜಲಿ ಖಾರ್ವಿ ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.