ಕಾರವಾರ: ಕರ್ನಾಟಕ ಸರ್ಕಾರದ ಲೋಗೋ ಹೊಂದಿರುವ ಖಾಕಿ ಬಟ್ಟೆ ಧರಿಸಿರುವ ವ್ಯಕ್ತಿಯೊಬ್ಬರು ಗೋವಾದಲ್ಲಿ ಸರಾಯಿ ಖರೀದಿಸಿದ ವಿಡಿಯೋ ವೈರಲ್ ಆಗಿದೆ. ಕಾರವಾರ ನೊಂದಣಿಯ ವಾಹನ ಏರಿ ಗೋವಾ ಸರಾಯಿ ಸಾಗಿಸಿರುವುದು ದೃಶ್ಯಾವಳಿಯಲ್ಲಿ ಕಾಣಿಸುತ್ತಿದೆ.
ಆದರೆ, ಈ ಖಾಕಿ ಸಮವಸ್ತ್ರ ಧರಿಸಿದ ವ್ಯಕ್ತಿ ಯಾವ ಇಲಾಖೆಗೆ ಸೇರಿದ ನೌಕರ? ಎನ್ನುವ ಬಗ್ಗೆ ಚರ್ಚೆ ನಡೆದಿದೆ.. ನಿಷೇಧಿತ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಗೋವಾ ಸರಾಯಿಯನ್ನು ಸರ್ಕಾರಿ ನೌಕರ ಕಾರವಾರ ಕಡೆ ಅಕ್ರಮವಾಗಿ ಸಾಗಿಸಿರುವುದು ಕಾಣಿಸಿದೆ. ಕೆಎ 30 ನೋಂದಣಿಯ ಬೈಕು ಸಹ ವಿಡಿಯೋದಲ್ಲಿ ಸರೆಯಾಗಿದೆ.
ಖಾಕಿ ಧರಿಸಿದ ವ್ಯಕ್ತಿ ಮೊದಲು ಗೋವಾದ ಮದ್ಯದ ಮಳಿಗೆಯಲ್ಲಿ ಆ ವ್ಯಕ್ತಿ ವಿವಿಧ ಬಾಟಲಿಗಳ ಬೆಲೆ ವಿಚಾರಿಸಿದ್ದಾರೆ. ನಂತರ ಎರಡು ಪ್ಲಾಸ್ಟಿಕ್ ಬ್ಯಾಗಿನಲ್ಲಿ ದೊಡ್ಡ ದೊಡ್ಡ ಆರು ಮದ್ಯದ ಬಾಟಲಿ ಪಡೆದಿದ್ದಾರೆ. ನಂತರ ಅದನ್ನು ಅಲ್ಲಿಂದ ಸಾಗಿಸಿದ್ದಾರೆ.
ಮದ್ಯದ ಅಂಗಡಿಯಲ್ಲಿ ಸೆರೆಯಾದ ವಿಡಿಯೋದಲ್ಲಿ ಯುನಿಪಾರಂ ಧರಿಸಿದ ವ್ಯಕ್ತಿಯ ಎಡ ತೋಳಿನ ಮೇಲೆ ಕರ್ನಾಟಕ ರಾಜ್ಯ ಸರ್ಕಾರದ ಬ್ಯಾಜ್ ಕಾಣುತ್ತಿದೆ. ಇದರಿಂದ ರಾಜ್ಯದ ಮಾನ ಹರಾಜಾಗುತ್ತಿದೆ.
ಇದೀಗ ಬಂದ ಸುದ್ದಿ!
`ಕರ್ನಾಟಕದ ಖಾಕಿ.. ಗೋವಾ ಸರಾಯಿ ಗಿರಾಕಿ’ ವರದಿ ಪ್ರಕಟವಾದ 20 ನಿಮಿಷದೊಳಗೆ ಆ ವ್ಯಕ್ತಿಯ ಬಗ್ಗೆ ಓದುಗರು S News ಡಿಜಿಟಲ್’ಗೆ ಮಾಹಿತಿ ನೀಡಿದ್ದಾರೆ. ಅಕ್ರಮ ಸರಾಯಿ ಸಾಗಾಟ ಮಾಡಿದವರು ಗಡಿ ಭಾಗದಲ್ಲಿ ಕರ್ತವ್ಯ ನಿಭಾಯಿಸುವ ಅಬಕಾರಿ ಸಿಬ್ಬಂದಿ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅಕ್ರಮ ಸರಾಯಿ ಸರಬರಾಜು ತಡೆಯಬೇಕಿದ್ದ ಅಬಕಾರಿ ಸಿಬ್ಬಂದಿಯೇ ಈ ರೀತಿ ಅಕ್ರಮ ನಡೆಸಿದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.