ಕಾರವಾರದ ಅಸ್ನೋಟಿಯ ಶಿವಾಜಿ ವಿದ್ಯಾಮಂದಿರದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಲೇಖನಿ ಹಾಗೂ ಪರೀಕ್ಷಾ ಪ್ರವೇಶ ಪತ್ರ ವಿತರಿಸಿದ ನ್ಯಾಯವಾದಿ ಸಂಜಯ ಸಾಳುಂಕೆ `ಉತ್ತಮ ನಡೆ-ನುಡಿ ರೂಢಿಸಿಕೊಂಡು ಒಳ್ಳೆಯ ಪ್ರಜೆಗಳಾಗಿ ಹೊರಹೊಮ್ಮಿ’ ಎಂದು ಕಿವಿಮಾತು ಹೇಳಿದರು.
`ವಿದ್ಯಾರ್ಥಿ ಜೀವನ ಅಮೂಲ್ಯವಾಗಿದೆ. ಅದರಲ್ಲಿಯೂ ಎಸ್ಎಸ್ಎಲ್ಸಿ ಪರೀಕ್ಷೆ ಎಂಬುದು ವಿದ್ಯಾರ್ಥಿಗಳ ಪಾಲಿಗೆ ಮಹತ್ವದ ಘಟ್ಟ. ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸಿ. ಗೆಲುವು ಸಾಧಿಸಿ’ ಎಂದು ಅವರು ಕರೆ ನೀಡಿದರು. `ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆ ಅನಿವಾರ್ಯ. ಪ್ರತಿ ಮಕ್ಕಳು ದಿಟ್ಟ ಹೆಜ್ಜೆಗಳನ್ನು ಮೂಡಿಸಿ ಶಾಲೆಯ ಕೀರ್ತಿ ಹೆಚ್ಚಿಸಬೇಕು’ ಎಂದು ಅವರು ಸ್ಪೂರ್ತಿ ತುಂಬಿದರು.
ಮುಖ್ಯಾಧ್ಯಾಪಕರಾದ ದಿನೇಶ ಗಾಂವಕರ್ ಮಾತನಾಡಿ `ಕಷ್ಟ-ನಷ್ಟ ಏನೇ ಬರಲಿ. ತಮ್ಮ ಓದು ಯಶಸ್ಸಿಗಾಗಿ ದಾರಿಯಾಗಲಿ’ ಎಂದು ಶುಭಕೋರಿದರು. ಶಿಕ್ಷಕರಾದ ಗಣೇಶ ಬಿಷ್ಟಣ್ಣನವರ, ವಿಜಯಕುಮಾರ ನಾಯ್ಕ್, ಶರತ್ ಗಾಂವಕರ್, ಸಂತೋಷ ಕಾಂಬ್ಳೆ, ಜೆ ಬಿ ತಿಪ್ಪೇಸ್ವಾಮಿ, ರೂಪಾಲಿ ಸಾವಂತ ಹಾಗೂ ಮಹಾದೇವ ಅಸ್ನೋಟಿಕರ್ ವೇದಿಕೆಯಲ್ಲಿದ್ದರು. ಅವರೆಲ್ಲರೂ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗೆ ಶುಭ ಕೋರಿದರು.