ಹುಬ್ಬಳ್ಳಿಯಿoದ ಯಲ್ಲಾಪುರ ಕಡೆ ಬರುತ್ತಿದ್ದ ಲಾರಿ ಕೆ ಜಿ ಎನ್ ಬ್ರಿಕ್ಸ ಇಂಡಸ್ಟಿ ಹತ್ತಿರ ಬೈಕಿಗೆ ಡಿಕ್ಕಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದು, ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಹಾವೇರಿ ಶಿಗ್ಗಾವಿನ ನಾಗರಾಜ ಕುಂದೂರು (30) ಅವರು ಮಾರ್ಚ 9ರಂದು ಯಲ್ಲಾಪುರಕ್ಕೆ ಬಂದಿದ್ದರು. ಯಲ್ಲಾಪುರದಿಂದ ಹುಬ್ಬಳ್ಳಿ ಮಾರ್ಗವಾಗಿ ಅವರು ಬೈಕ್ ಓಡಿಸುತ್ತಿದ್ದರು. ಇದೇ ವೇಳೆ ರಾಯಚೂರಿನ ಲಾರಿ ಚಾಲಕ ಅಮರೇಶ ವೀರಭದ್ರಪ್ಪ ಹುಬ್ಬಳ್ಳಿ ಕಡೆಯಿಂದ ವೇಗವಾಗಿ ಲಾರಿ ಓಡಿಸಿಕೊಂಡು ಬಂದಿದ್ದು, ನಾಗರಾಜ ಕುಂದೂರು ಅವರ ಬೈಕಿಗೆ ಎದುರಿನಿಂದ ಗುದ್ದಿದರು.
ಬೈಕಿಗೆ ಲಾರಿ ಗುದ್ದಿದ ರಭಸಕ್ಕೆ ಬೈಕ್ ನೆಲಕ್ಕೆ ಅಪ್ಪಳಿಸಿತು. ನಾಗರಾಜ ಕುಂದೂರು ಸಹ ನೆಲಕ್ಕೆ ಬಿದ್ದರು. ಲಾರಿಯ ಡೀಸೆಲ್ ಟ್ಯಾಂಕ್ ನಾಗರಾಜ ಕುಂದೂರು ಅವರಿಗೆ ಬಡಿಯಿತು. ಪರಿಣಾಮ ಅವರ ಮೂಗು, ಕಿವಿ ಹಾಗೂ ಬಾಯಿಯಿಂದ ರಕ್ತ ಬರಲು ಶುರುವಾಯಿತು. ಕ್ಷಣ ಮಾತ್ರದಲ್ಲಿ ಅವರು ಅಲ್ಲಿಯೇ ಸಾವನಪ್ಪಿದರು.
ಜಮಗುಳಿಯ ಜಿಯೋ ಟವರ್ ಟೆಕ್ನಿಶಿಯನ್ ವಾಸುದೇವ ಗಾವಡೆ ಈ ಅಪಘಾತದ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ಪೊಲೀಸ್ ನಿರೀಕ್ಷಕ ರಮೇಶ ಹಾನಾಪುರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಅವರು ತನಿಖೆ ನಡೆಸುತ್ತಿದ್ದಾರೆ.