ರಸ್ತೆ ಬದಿ ನಿಲ್ಲಿಸಿದ ಮಿನಿ ಬಸ್ಸು ಚಾಲಕನಿಲ್ಲದೇ ಚಲಿಸಿದೆ. ಪರಿಣಾಮ ಮಿನಿ ಬಸ್ಸಿನ ಮುಂದಿದ್ದ ಬೈಕು ಜಖಂ ಆಗಿದೆ.
ಹೊನ್ನಾವರದ ಬಾಳೆಗದ್ದೆ ಬಳಿ ಖಾಸಗಿ ಬಸ್ಸಿನ ಚಾಲಕ ತಮ್ಮ ವಾಹನವನ್ನು ರಸ್ತೆ ಬದಿ ನಿಲ್ಲಿಸಿದ್ದರು. ಆ ಮಿನಿ ಬಸ್ಸಿನಲ್ಲಿ ಐವರು ಪ್ರಯಾಣಿಕರಿದ್ದರು. ಇನ್ನಷ್ಟು ಜನರ ಆಗಮನಕ್ಕಾಗಿ ಚಾಲಕ ಊರಿನ ಹೆಸರು ಹೇಳಿ ಕೂಗುತ್ತಿದ್ದು, ಆ ವೇಳೆ ಮಿನಿ ಬಸ್ಸು ಚಲಿಸಲು ಶುರುವಾಗಿದೆ.
ಗ್ರಾಮಿಣ ಪ್ರದೇಶಕ್ಕೆ ಸಂಚರಿಸಬೇಕಿದ್ದ ಆ ವಾಹನ ಏಕಾಏಕಿ ಮುಂದೆ ಚಲಿಸಿದ್ದರಿಂದ ರಸ್ತೆ ಅಂಚಿನಲ್ಲಿ ನಿಲ್ಲಿಸಿದ್ದ ಬೈಕ್ ಜಖಂ ಆಗಿದೆ. ಬೈಕಿಗೆ ಗುದ್ದಿದ ಮಿನಿ ಬಸ್ಸು ಅಲ್ಲಿಯೇ ನಿಂತುಕೊoಡಿದ್ದರಿoದ ದೊಡ್ಡ ಪ್ರಮಾಣದ ಅನಾಹುತವು ತಪ್ಪಿದೆ. ಮಿನಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಬೊಬ್ಬೆ ಹಾಕಿದ್ದರಿಂದ ಚಾಲಕ ಬಂದು ವಾಹನವನ್ನು ನಿಯಂತ್ರಣಕ್ಕೆ ಪಡೆದರು.