ಸಿದ್ದಾಪುರ: ಮಟ್ಕಾ ಆಡಿಸುವವರ ಜೂಜಾಟದ ಚಟ ಬಿಡಿಸಲು ಗುದ್ದಾಡುತ್ತಿರುವ ಪೊಲೀಸ್ ನಿರೀಕ್ಷಕ ಜೆ ಬೆ ಸೀತಾರಾಮ ಇದೀಗ ಇನ್ನೊಂದು ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ.
ಹೆಗ್ಗರಣಿ ಸರ್ಕಲ್ ಬಳಿ ಮಟ್ಕಾ ಆಡಿಸುತ್ತಿದ್ದ ವೀರೇಂದ್ರ ಗೌಡ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ, ಅವರು ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದ್ದಾರೆ. ಹೆಗ್ನೂರು ಬಳಿಯ ಅತ್ತಿಸೌಲ್’ನ ವೀರೇಂದ್ರ ಗೌಡ ಡಿ 7ರಂದು ಹೆಗ್ಗರಣಿ ಸರ್ಕಲಿನಲ್ಲಿ ನಿಂತು ಮಟ್ಕಾ ವ್ಯಾಪಾರ ನಡೆಸುತ್ತಿದ್ದಾಗ ಪೊಲೀಸರು ದಾಳಿ ಮಾಡಿದರು.
ಪೊಲೀಸ್ ನಿರೀಕ್ಷಕ ಜೆ ಬೆ ಸೀತಾರಾಮ ಅವರು ವೀರೇಂದ್ರ ಗೌಡರನ್ನು ತಡುಕಾಡಿದಾಗ ಮಟ್ಕಾ ಆಟಕ್ಕೆ ಬಳಸಿದ್ದ ಚೀಟಿ, ಬಾಲ್ಪೆನ್ನು ಹಾಗೂ ಜನರಿಂದ ಸಂಗ್ರಹಿಸಿದ್ದ 850ರೂ ಹಣ ಸಿಕ್ಕಿತು. ಅವೆಲ್ಲವನ್ನು ವಶಕ್ಕೆ ಪಡೆದು ವೀರೇಂದ್ರ ಗೌಡರಿಗೆ ಪೊಲೀಸರು ಎಚ್ಚರಿಕೆ ನೀಡಿದರು. ಕಾನೂನುಬಾಹಿರ ಜೂಜಾಟ ನಡೆಸಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿದರು.