ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಲಾರಿಗಳಿಗೆ ಅಳವಡಿಸಿದ್ದ ಕರ್ಕಶ ಧ್ವನಿ ವರ್ಧಕಗಳನ್ನು ಯಲ್ಲಾಪುರ ಪೊಲೀಸರು ತೆಗೆಯುತ್ತಿದ್ದಾರೆ.
ಹುಬ್ಬಳ್ಳಿ ಅಂಕೋಲಾ ರಾಷ್ಟಿಯ ಹೆದ್ದಾರಿಯಲ್ಲಿ ಸಂಚರಿಸುವ ಅನೇಕ ಲಾರಿಗಳು ದೊಡ್ಡದಾದ ಹಾರ್ನ ಹೊಂದಿದ್ದವು. ಹಗಲು-ರಾತ್ರಿ ಎನ್ನದೇ ಎಲ್ಲೆಂದರಲ್ಲಿ ಲಾರಿ ಚಾಲಕರು ದೊಡ್ಡದಾಗಿ ಹಾರ್ನ ಹೊಡೆಯುತ್ತಿದ್ದರು. ಇದರಿಂದ ಇತರೆ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗಿತ್ತು.
ರಾತ್ರಿ ವೇಳೆ ದೊಡ್ಡದಾಗಿ ಹಾರ್ನ ಹೊಡೆಯುವುದರಿಂದ ಹೆದ್ದಾರಿ ಅಂಚಿನ ಮನೆಗಳಲ್ಲಿ ವಾಸಿಸುವವರು ಆಕ್ಷೇಪಿಸುತ್ತಿದ್ದರು. ಈ ಹಿನ್ನಲೆ ಪಿಎಸ್ಐ ಸಿದ್ದು ಗುಡಿ ತಂಡದವರು ಕಾರ್ಯಾಚರಣೆ ನಡೆಸಿದರು. ಕರ್ಕಶ ಶಬ್ದ ಹೊಂದಿದ ಲಾರಿಗಳನ್ನು ಹಿಡಿದು ಧ್ವನಿ ವರ್ಧಕಗಳನ್ನು ತೆಗೆದರು. ಆ ರೀತಿ ಶಬ್ದ ಮಾಡುವ ಲಾರಿ ಚಾಲಕರಿಗೆ ದಂಡವನ್ನು ವಿಧಿಸಿದರು. ಬೇರೆ ಬೇರೆ ರಾಜ್ಯದ ಲಾರಿಗಳು ಸಿಕ್ಕಿ ಬಿದ್ದವು.