ಕಾರವಾರ: ಬೈತಖೋಲ್ ಬಳಿ ಮಟ್ಕಾ ಆಡಿಸುತ್ತಿದ್ದ ಮಹೇಶ ಮಾಳಸೇಕರ್ ಮೇಲೆ ಪೊಲೀಸ್ ಉಪ ನಿರೀಕ್ಷಕಿ ಸುಧಾ ಅಘನಾಶಿನಿ ಹಾಗೂ ತಂಡದವರು ದಾಳಿ ನಡೆಸಿದ್ದಾರೆ. ಜೂಜಾಟ ನಡೆಸುವವರ ಮೇಲೆ ನಿರಂತರ ದಾಳಿ ಮುಂದುವರೆಸಿದ ಪೊಲೀಸರು ಸಾಕ್ಷಿಸಹಿತ ಮಹೇಶ ಮಾಳಸೇಕರ್’ರ ಹೆಡೆಮುರಿ ಕಟ್ಟಿದ್ದಾರೆ.
ಕಾರವಾರ ನ್ಯೂ ಕೆಎಚ್ಬಿ ಕಾಲೋನಿ ಗಿಂಡಿ ದೇವಸ್ಥಾನದ ಮಹೇಶ ಮಾಳಸೇಕರ್ ಅವರು ಹಳದಿಪುರದ ಪೆಟ್ರೋಲ್ ಬಂಕಿನ ಬಳಿಯ ಅಂಗಡಿಗೆ ಬರುವವರನ್ನು ಮಾತನಾಡಿಸಿ ಮಟ್ಕಾ ಆಟಕ್ಕೆ ಪ್ರೇರೇಪಿಸುತ್ತಿದ್ದರು. `ಅದೃಷ್ಟದ ಆಟ ಆಡಿ’ ಎಂದು ಉತ್ತೇಜಿಸಿ ಹಣ ಪಡೆಯುತ್ತಿದ್ದರು. ಮಟ್ಕಾ ಆಟದ ದೂರಿನ ಹಿನ್ನಲೆ ಪೊಲೀಸರು ಎರಡು ದಿನದಿಂದ ಆತನ ಚಲನ-ವಲನದ ಮೇಲೆ ನಿಗಾ ಇರಿಸಿದ್ದರು.
ಅವರು ಡಿ 13ರ ರಾತ್ರಿ 8 ಗಂಟೆಗೆ ಬೈತಖೋಲ್ ಬಳಿ ಮಟ್ಕಾ ಆಡಿಸುತ್ತಿದ್ದಾಗ ಪೊಲಿಸರು ದಾಳಿ ನಡೆಸಿದರು. ಮಟ್ಕಾ ಚೀಟಿ, ಬಾಲ್ಪೆನ್ನಿನ ಜೊತೆ ಜನರಿಂದ ಸಂಗ್ರಹಿಸಿದ್ದ 1930ರೂ ಹಣವನ್ನು ವಶಕ್ಕೆ ಪಡೆದರು. ಕಾನೂನುಬಾಹಿರ ಆಟ ಆಡಿಸುತ್ತಿದ್ದ ಕಾರಣ ಪ್ರಕರಣ ದಾಖಲಿಸಿಕೊಂಡರು.