ಕಾರವಾರದ ಬಾಲ ಮಂದಿರದಲ್ಲಿದ್ದ SSLC ವಿದ್ಯಾರ್ಥಿನಿ ಶ್ವೇತಾ ಪಣಿಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಲ ಮಂದಿರದ ಸಿಬ್ಬಂದಿ ಹಿಂಸೆಯಿ0ದ ಅವರು ಆತ್ಮಹತ್ಯೆಗೆ ಶರಣಾದ ಆರೋಪ ವ್ಯಕ್ತವಾಗಿದೆ.
ಬಡತನದ ಕಾರಣದಿಂದ ಶ್ವೇತಾ ಫಣ್ಣಿಕರ್ (16) ಬಾಲಕಿಯರ ಬಾಲ ಮಂದಿರ ಸೇರಿದ್ದರು. ಅಲ್ಲಿಯೇ ಉಳಿದು ಅವರು ಓದುತ್ತಿದ್ದರು. ಗುರುವಾರ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯಿದ್ದರೂ ಶ್ವೇತಾ ಅವರು ತೆರಳಿರಲಿಲ್ಲ. ಸದ್ಯ ಬಾಲ ಮಂದಿರದ ಕೋಣೆಯಲ್ಲಿ ಅವರು ನೇಣಿಗೆ ಶರಣಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಇನ್ನೂ, ಶ್ವೇತಾ ಅವರ ತಾಯಿ ಬಾಲ ಮಂದಿರದ ವಾರ್ಡನ್ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಸಹ ವಾರ್ಡನ್ ಹಿಂಸೆ ಸಹಿಸದೇ ಶ್ವೇತಾ ಸಾವನಪ್ಪಿರುವ ಬಗ್ಗೆ ದೂರು ನೀಡಿದ್ದಾರೆ. ವಾರ್ಡನ್ ಹಾಗೂ ಸಿಬ್ಬಂದಿ ನಿತ್ಯ ಹಿಂಸೆ ನೀಡುವುದನ್ನು ಸಹಿಸದೇ ಶ್ವೇತಾ ನೇಣಿಗೆ ಶರಣಾದ ಬಗ್ಗೆ ಅವರ ಪಾಲಕರು ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ.