ಶಿರಸಿ: ಕಸ್ತೂರಬಾ ನಗರದ ವಿಶ್ವೇಶ್ವರ ಬಡಾವಣೆಗೆ ಬಂದ ಕಳ್ಳರು ಮನೆಯ ಹಂಚು ತೆಗೆದು ಒಳಗೆ ಪ್ರವೇಶಿಸಿದ್ದಾರೆ. ನಂತರ ಮನೆಯೊಳಗಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ನಾಗರಾಜ ವಾಸುದೇವ ನಿಲೇಕಣಿ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿದ್ದ 1.31 ಲಕ್ಷ ರೂ ಮೌಲ್ಯದ ಚಿನ್ನದ ಆಭರಣ ಕಳ್ಳರ ಪಾಲಾಗಿದೆ. ಮರ್ನಾಲ್ಕು ಹಂಚು ತೆಗೆದು ಮನೆ ಒಳಗೆ ನುಗ್ಗಿದ ಕಳ್ಳರು ಮನೆ ಪೂರ್ತಿ ಜಾಲಾಡಿದ್ದಾರೆ. ಅಲ್ಲಿದ್ದ ಬಟ್ಟೆಗಳನ್ನು ಚಲ್ಲಾಪಿಲ್ಲಿಯಾಗಿಸಿದ್ದಾರೆ.
ಅದಾದ ನಂತರ ಕೋಣೆಯೊಳಗಿದ್ದ 4.280 ಗ್ರಾಂ ತೂಕದ ವಜ್ರದ ಹರಳು ಹೊಂದಿದ ಕಿವಿಯೋಲೆ ಎಗರಿಸಿದ್ದಾರೆ. ಇದರ ಮೌಲ್ಯ 96,850 ರೂಪಾಯಿಗಳಾಗಿದೆ. ಇದರೊಂದಿಗೆ 34150 ರೂ ಮೌಲ್ಯದ ಎರಡು ಉಂಗುರವನ್ನು ದೋಚಿದ್ದಾರೆ. ಪಿಎಸ್ಐ ರತ್ನಾ ಕುರಿ ಸ್ಥಳ ಪರಿಶೀಲನೆ ನಡೆಸಿದ್ದು, ಕಳ್ಳರ ಹುಡುಕಾಟ ಮುಂದುವರೆದಿದೆ.