ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ಸಮುದ್ರ ತೀರದಲ್ಲಿ ಆಮೆ ಮೊಟ್ಟೆಯಿಟ್ಟಿದ್ದು, ಅದನ್ನು ಅರಣ್ಯ ಇಲಾಖೆ ಸಂರಕ್ಷಿಸಿದೆ. ಸಾವಿರಾರು ಮೊಟ್ಟೆಗಳಿಂದ ಆಮೆ ಮರಿಗಳು ಹೊರ ಬಂದಿವೆ. ಆ ಮರಿಗಳನ್ನು ಅರಬ್ಬಿ ಸಮುದ್ರದ ವಿಶಾಲ ಪ್ರಪಂಚಕ್ಕೆ ಬಿಡಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಕಡಲತೀರ ಅನೇಕ ಜೀವ ವೈವಿಧ್ಯ ಸಂಕುಲಗಳ ವಾಸಸ್ಥಾನ. ಅಳಿವಿನ ಅಂಚಿನಲ್ಲಿರುವ ಆಲಿವ್ ರಿಡ್ಲೆ ಆಮೆಗಳು ಸಹ ಹಲವು ವಿಶೇಷಗಳಿಂದ ಕೂಡಿರುವಂಥಹುದು. ಇಲ್ಲಿನ ಕಡಲತೀರವನ್ನು ಅವು ಸಂತಾನೋತ್ಪತ್ತಿ ತಾಣವನ್ನಾಗಿ ಮಾಡಿಕೊಂಡಿದ್ದು, ಸಂರಕ್ಷಿಸಿದ ಮೊಟ್ಟೆಗಳೆಲ್ಲವೂ ಮರಿಗಳಾಗುತ್ತಿವೆ. ಅರಣ್ಯ ಇಲಾಖೆಯ ಮುತುವರ್ಜಿಯಿಂದ ಅವು ಕಡಲು ಸೇರುತ್ತಿವೆ.
ಫೆಬ್ರವರಿಯಿಂದ ಏಪ್ರಿಲ್ ಅಂತ್ಯದವರೆಗೆ ಕಾರವಾರ, ದೇವಬಾಗ್, ಮಾಜಾಳಿ, ಅಂಕೋಲಾ, ಮಾಜಾಳಿ, ಹೊನ್ನಾವರ, ಕುಮಟಾ, ಗೋಕರ್ಣ ಸೇರಿ ವಿವಿಧ ಕಡಲತೀರಗಳಲ್ಲಿ ಆಮೆಗಳು ಮೊಟ್ಟೆ ಇಡುತ್ತವೆ. 45 ದಿನಗಳ ಕಾಲ ಅವನ್ನು ರಕ್ಷಿಸಿ ಮರಿಗಳನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ. ಹೀಗಾಗಿ ಸಹಸ್ರಾರು ವೈವಿಧ್ಯಮಯ ಜೀವಿಸಂಕುಲಗಳ ವಾಸಸ್ಥಾನಗಳೊಂದಿಗೆ ಆಲಿವ್ ರಿಡ್ಲೆ ಆಮೆಗಳು ಇದೀಗ ಪ್ರಪಂಚ ಪರ್ಯಟನೆಗೆ ಹೊರಡುತ್ತಿವೆ.
ಶನಿವಾರ ಕಾರವಾರದಲ್ಲಿಯೂ ಚಿಕ್ಕ ಚಿಕ್ಕ ಮಕ್ಕಳು ಆಮೆಗಳನ್ನು ಹಿಡಿದು ಸಂಭ್ರಮಿಸಿದರು. ಅವುಗಳನ್ನು ತಾವೇ ಸಮುದ್ರಕ್ಕೆ ಬಿಟ್ಟು ಬಂದರು. ವಿವಿಧ ಜಾತಿಯ ಮೀನುಗಳು, ಕಪ್ಪೆ ಚಿಪ್ಪು, ನೀಲಿಕಲ್ಲುಗಳು ಆ ಆಮೆಗಳನ್ನು ಸ್ವಾಗತಿಸಿದವು.
ಚಿಣ್ಣರು ಆಮೆಗಳನ್ನು ಸಮುದ್ರಕ್ಕೆ ಬಿಟ್ಟು ಸಂಭ್ರಮಿಸಿದ ವಿಡಿಯೋ ಇಲ್ಲಿ ನೋಡಿ..