ಮುಂಡಗೋಡು ಪಟ್ಟಣದ ಹಲವು ಕಡೆ ಅನುಮಾನಾಸ್ಪದ ರೀತಿಯಲ್ಲಿ ಡ್ರೋಣ್ ಹಾರಾಟ ನಡೆದಿದೆ. ಆತಂಕಕ್ಕೆ ಒಳಗಾದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪಟ್ಟಣದ ಹಲವು ಭಾಗದಲ್ಲಿ ಶನಿವಾರ ಮೂರು ತಾಸು ಡ್ರೋಣ್ ಹೋರಾಟ ನಡೆದಿದೆ. ಗಾಂಧೀನಗರ, ನೆಹರು ನಗರ, ಕಂಬಾರಕಟ್ಟಿ ಪ್ಲಾಟಿನ ಚಿತ್ರಿಕರಣವನ್ನು ಡ್ರೋಣ್ ನಡೆಸಿದೆ. ಸ್ಥಳೀಯರು ಡ್ರೋಣ್ ಹಾರಿಸಿದರೆ 20-25 ನಿಮಿಷ ಮಾತ್ರ ಹಾರಿಸುತ್ತಾರೆ. ನಿರಂತರವಾಗಿ ಮೂರು ತಾಸು ಡ್ರೋಣ್ ಹಾರಿಸುವವರು ಇಲ್ಲ ಎಂಬುದು ಅಲ್ಲಿನವರ ಅಭಿಪ್ರಾಯ.
ಕೆಲ ಸಮಯಗಳ ಕಾಲ ಅತ್ಯಂತ ಎತ್ತರದಲ್ಲಿ ಹಾರಾಟ ನಡೆಸಿದ ಡ್ರೋಣ್ ನಂತರ ಏಕಾಏಕಿ ಕೆಳಭಾಗಕ್ಕೆ ಬಂದಿದೆ. ಡ್ರೋಣ್ ಹಾರಾಟದ ಶಬ್ದ ಕೇಳಿದ ಜನ ಮನೆಯಿಂದ ಹೊರಬಂದು ಗಮನಿಸಿದ್ದಾರೆ. ಆದರೆ, ಈ ರೀತಿ ಡ್ರೋಣ್ ಹಾರಿಸಿದವರು ಯಾರು? ಎಂದು ಜನರಿಗೆ ಗೊತ್ತಾಗಲಿಲ್ಲ.
ಹೀಗಾಗಿ ಅನುಮಾನಗೊಂಡ ಜನ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸಹ ಡ್ರೋಣ್ ಹಾರಾಟದ ಸ್ಥಳಗಳ ಪರಿಶೀಲನೆ ನಡೆಸಿದರು. ಆದರೆ, ಯಾರು? ಯಾವ ಉದ್ದೇಶಕ್ಕೆ ಡ್ರೋಣ್ ಹಾರಾಟ ನಡೆಸಿದರು? ಎಂದು ಗೊತ್ತಾಗಲಿಲ್ಲ. `ಮುಂಡಗೋಡಿನ ಸ್ಥಳೀಯ ಹಾಡುಗಳ ಚಿತ್ರಿಕರಣಕ್ಕಾಗಿ ಡ್ರೋಣ್ ಹಾರಾಟ ನಡೆದಿರಬಹುದು. ಆತಂಕಪಡುವ ಅಗತ್ಯವಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.