ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಮಗು ಹಳ್ಳದ ನೀರಿನಲ್ಲಿ ಬಿದ್ದು ಸಾವನಪ್ಪಿದೆ. ನೀರಿನಲ್ಲಿ ಬಿದ್ದಿದ್ದ ಮಗುವನ್ನು ಮೇಲೆತ್ತಿ ಉಪಚರಿಸಿದರೂ ಪ್ರಯೋಜನವಾಗಲಿಲ್ಲ.
ಕುಮಟಾ ತಾಲೂಕಿನ ಎತ್ತಿನಬೈಲಿನ ಎಲೆಕ್ಟಿಶಿಯನ್ ಮಂಜುನಾಥ ಗಾಂವ್ಕರ್ ಅವರ ಪುತ್ರಿ ನಿವೇದಿತಾ ಭಾನುವಾರ ಮನೆ ಅಂಗಳದಲ್ಲಿ ಆಡುತ್ತಿದ್ದರು. ಅವರ ಮನೆ ಮುಂದೆ ಹಳ್ಳ ಹರಿಯುತ್ತಿದ್ದು, ಆಟವಾಡುತ್ತಿದ್ದ ಕಂದಮ್ಮ ಆಕಸ್ಮಿಕವಾಗಿ ಆ ಹಳ್ಳದಲ್ಲಿ ಬಿದ್ದರು. ಇದನ್ನು ನೋಡಿದ ಮನೆಯವರು ತಕ್ಷಣ ನಿವೇದಿತಾರನ್ನು ನೀರಿನಿಂದ ಮೇಲೆತ್ತಿದ್ದರು. ಆದರೆ, ನಿವೇದಿತಾ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.
ಅಸ್ವಸ್ಥಗೊಂಡಿದ್ದ ಅವರನ್ನು ಆಂಬುಲೆನ್ಸ ಮೂಲಕ ಕುಮಟಾಗೆ ಸಾಗಿಸಲಾಯಿತು. ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ನಿವೇದಿತಾ ಕೊನೆಉಸಿರೆಳೆದಿದ್ದರು. ವೈದ್ಯರು ಇದನ್ನು ದೃಢೀಪಡಿಸಿದರು.