ನಿರಂತರ ಹೋರಾಟದ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಎಂ ಕೆ ಭಟ್ಟ ಯಡಳ್ಳಿ ಅವರ ಮನೆ ಭದ್ರತೆಗಿದ್ದ ನಾಯಿ ಚಿರತೆಗೆ ಆಹಾರವಾಗಿದೆ. ಕಾಡಿನಲ್ಲಿರುವ ಪ್ರಾಣಿಗಳು ವಸತಿ ಪ್ರದೇಶಕ್ಕೆ ನುಗ್ಗುತ್ತಿರುವ ಬಗ್ಗೆ ಎಂ ಕೆ ಭಟ್ಟ ಯಡಳ್ಳಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಹಾಸಣಗಿ ಬಳಿಯ ಎಂ ಕೆ ಭಟ್ಟ ಯಡಳ್ಳಿ ಅವರು ತಮ್ಮ ಮನೆಯಲ್ಲಿ ಸ್ಥಳೀಯ ಪ್ರಬೇದದ ನಾಯಿಯನ್ನು ಸಾಕಿದ್ದರು. ಎರಡು ವರ್ಷದ ನಾಯಿ ಅತ್ಯಂತ ಚುರುಕಿನಿಂದ ಕೆಲಸ ನಿರ್ವಹಿಸುತ್ತಿತ್ತು. ಗುರುವಾರ ರಾತ್ರಿ ವೇಳೆ ಮನೆ ಅಂಗಳಕ್ಕೆ ನುಗ್ಗಿದ ಚಿರತೆ ನಾಯಿಯನ್ನು ಹಿಡಿದಿದೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಿರತೆಯಿಂದ ತಪ್ಪಿಸಿಕೊಳ್ಳಲು ನಾಯಿ ಸಾಕಷ್ಟು ಕಾದಾಟ ನಡೆಸಿದ್ದು, ಕೊನೆಗೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿಧಾನವಾದ ಹೆಜ್ಜೆಯೊಂದಿಗೆ ಅಂಗಳ ಪ್ರವೇಶಿಸಿದ ಚಿರತೆ ನಾಯಿಯನ್ನು ಹಿಡಿದು ಹೊರಗೆ ಹೋದ ದೃಶ್ಯಾವಳಿಗಳು ವೈರಲ್ ಆಗಿದೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಚಿರತೆ ಓಡಾಟ ಹೆಚ್ಚಾಗಿದೆ. ಜನ ವಸತಿ ಪ್ರದೇಶಗಳಿಗೂ ಚಿರತೆ ನುಗ್ಗುತ್ತಿರುವುದರಿಂದ ಜನ ಆತಂಕದಲ್ಲಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..