ಶಿರಸಿಯಲ್ಲಿ ಗುಜುರಿ ಸಾಮಗ್ರಿ ಒಯ್ಯುವ ಟಾಕ್ಟರ್ ಟೈಯರ್ ಸ್ಪೋಟಗೊಂಡ ಪರಿಣಾಮ ಇಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸೋಮವಾರ ಸಂಜೆ `ನಾಗಲಿಂಗ ಟ್ರೇಲರ್ಸ’ ಎಂಬ ಟಾಕ್ಟರಿನವರು ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿರುವ ಸುಂಕದ ವಾಲ್ಕ್ ನೈಸಿಂಗ್ ಅಂಗಡಿಗೆ ಬಂದಿದ್ದರು. ಟಾಕ್ಟರ್ ಟೈಯರಿಗೆ ಗಾಳಿ ತುಂಬಿದ ನಂತರ ಗಾಳಿಯ ಪ್ರಮಾಣ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಟಾಕ್ಟರಿನ ಟೈಯರ್ ಸ್ಪೋಟವಾಗಿದೆ.
ಸ್ಪೋಟದ ರಭಸಕ್ಕೆ ಟಾಕ್ಟರ್ ಜೊತೆ ಬಂದಿದ್ದ ಇಬ್ಬರು ಪೆಟ್ಟು ಮಾಡಿಕೊಂಡಿದ್ದಾರೆ. ಆ ಪೈಕಿ ಒಬ್ಬರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿರುವ ಗಾಯಾಳು ನೋಡಿದ ಜನ ಅವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಗೊಂಡವರ ಚಪ್ಪಲಿಗಳು ಅಲ್ಲಿಯೇ ಬಿದ್ದಿವೆ. ಸ್ಪೋಟಗೊಂಡ ಟೈಯರ್ ಬಳಿ ಟಾಕ್ಟರ್’ಗೆ ಸಾಕಷ್ಟು ಪ್ರಮಾಣದಲ್ಲಿ ತುಕ್ಕು ಹಿಡಿದಿರುವುದು ಕಾಣಿಸುತ್ತಿದೆ. ಟೈಯರ್ ಅಂಗಡಿ ಮಾಲಕ ಬೇಜವಬ್ದಾರಿಯಿಂದ ಈ ಅವಘಡ ನಡೆದ ಬಗ್ಗೆಯೂ ಅಲ್ಲಿನವರು ದೂರಿದ್ದಾರೆ.
ಟಾಕ್ಟರ್’ಗೆ ಅಂಗಡಿಯವರು ಗಾಳಿ ಹಾಕಿಲ್ಲ. ಟಾಕ್ಟರ್ ಜೊತೆ ಬಂದವರೇ ಗಾಳಿ ಹಾಕಿಕೊಂಡು ತಪಾಸಣೆ ನಡೆಸುವ ವೇಳೆ ಸ್ಪೋಟ ನಡೆದಿರುವ ಬಗ್ಗೆಯೂ ಹೇಳಲಾಗಿದೆ. ಗಾಯಗೊಂಡವರ ಹೆಸರು-ವಿಳಾಸ ಸಹ ಈವರೆಗೆ ಗೊತ್ತಾಗಿಲ್ಲ.