ಕೂಲಿ ಕೆಲಸ ಮಾಡಿಕೊಂಡಿದ್ದ ಅಮೀತ ಕವಳೆಕರ್ ರೈಲಿಗೆ ತಲೆಕೊಟ್ಟು ತಮ್ಮ ಜೀವ ಕಳೆದುಕೊಂಡಿದ್ದಾರೆ.
ಕಾರವಾರದ ಅರವಾ ಪಂಟಲಭಾಗದಲ್ಲಿ ಅಮೀತ ಕವಳೆಕರ್ (34) ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಅವರಿಗೆ ಕಳೆದ ಎರಡುವರೆ ವರ್ಷಗಳ ಹಿಂದೆ ಮಾನಸಿಕ ಆಘಾತವಾಗಿತ್ತು. ಮಾನಸಿಕ ನೋವಿಗೆ ಅವರು ಚಿಕಿತ್ಸೆ ಪಡೆದರೂ ಪ್ರಯೋಜನವಾಗಿರಲಿಲ್ಲ.
ಎರಡುವರೆ ವರ್ಷದಿಂದ ಮಾನಸಿಕ ನೋವು ಅನುಭವಿಸಿ ಅಸ್ವಸ್ಥಗೊಂಡಿದ್ದ ಅವರು ಫೆ 16ರಂದು ಮನೆ ಬಳಿ ಹಾದು ಹೋದ ರೈಲಿಗೆ ತಲೆ ಕೊಟ್ಟರು. ಗೋವಾ ಕಡೆ ಸಂಚರಿಸುತ್ತಿದ್ದ ರೈಲು ಅವರ ತಲೆಯನ್ನು ತುಂಡರಿಸಿತು. ಈ ವಿಷಯದ ಬಗ್ಗೆ ಅಮೀತ ಅವರ ಅಣ್ಣ ಅಜೀತ ಕವಳೆಕರ್ ಪೊಲೀಸರಿಗೆ ವರದಿ ಒಪ್ಪಿಸಿದರು. ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.