ಕುಮಟಾದ ದಿವಗಿಯಲ್ಲಿ ಯುವಾ ಬ್ರಿಗ್ರೆಡ್ ನಡೆಸಿದ ಅಘನಾಶಿನಿ ಆರತಿ ಕಾರ್ಯಕ್ರಮ ಅತ್ಯಂತ ಶೃದ್ದಾ-ಭಕ್ತಿಯಿಂದ ನಡೆದಿದ್ದು, ಭಾನುವಾರ ರಾತ್ರಿಯ ಈ ಕಾರ್ಯಕ್ರಮಕ್ಕೆ ಸಾವಿರಾರು ಜನ ಸಾಕ್ಷಿಯಾಗಿದ್ದಾರೆ.
`ನದಿ ಪಾತ್ರದಲ್ಲಿ ಅನೇಕ ನಾಗರಿಕತೆ ಹಾಗೂ ವೇದಗಳ ಜನನವಾಗಿದೆ. ಇಂಥ ನದಿಗಳ ಉಳುವಿಗಾಗಿ ಯುವಾ ಬ್ರಿಗೇಡ್ ಅನೇಕ ನದಿಗಳ ಸ್ವಚ್ಛತಾ ಕಾರ್ಯ ನಡೆಸುತ್ತ ಬಂದಿದೆ. ಇದರ ಪರಿಣಾಮವಾಗಿ ಜನರಿಗೆ ಸಹ ನದಿಯ ಬಗ್ಗೆ ಅಭಿಮಾನ ಮೂಡಿದೆ’ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಶ್ರೀ ಅಭಿನವ ಹಾಲ ಸ್ವಾಮೀಜಿ ಮಹಾಸಂಸ್ಥಾನ ಮಠ ಹಿರೇಹಡಗಲಿ ಅವರು ಆಶೀರ್ವಚನ ನೀಡಿ `ತಾಯಿ ಮಕ್ಕಳನ್ನು ಪ್ರೀತಿ ಮಾಡುವಂತೆ ಅಘನಾಶಿನಿ ನದಿ ಈ ಭಾಗದ ಜನರ ಜೀವನಾಡಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.
ಮೂಡಬಿದರೆಯ ಕರಿಂಜೆಮಠದ ಮುಕ್ತಾನಂದ ಸ್ವಾಮೀಜಿ ಮಾತನಾಡಿ `ಧರ್ಮ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕಿದೆ. ಒಗ್ಗಟ್ಟು ಇಲ್ಲದೇ ಇದ್ದರೆ ಭವಿಷ್ಯ ಕಷ್ಟವಿದೆ’ ಎಂದು ಹೇಳಿದರು. ಯುವಾ ಬ್ರಿಗ್ರೇಡ್ ಸದಸ್ಯರು ಅಘನಾಶಿನಿ ನದಿಗೆ ಆರತಿ ಮಾಡಿ ಗಮನಸೆಳೆದರು. ದಿವಗಿ ಗ್ರಾಮ ಪಂಚಾಯತ ಅಧ್ಯಕ್ಷ ಜಗ್ಗು ಭಟ್, ಯುವಾ ಬ್ರಿಗ್ರೇಡ್ ತಂಡದ ಸುಭಾಸ್ ಅಂಬಿಗ, ಲಕ್ಷ್ಮೀಕಾಂತ ಮುಕ್ರಿ, ಹೇಮಂತಕುಮಾರ ಗಾಂವಕರ, ಗೌರೀಶ ನಾಯ್ಕ, ರವೀಶ ನಾಯ್ಕ, ಪ್ರಕಾಶ ನಾಯ್ಕ, ಸಚೀನ ಭಂಡಾರಿ, ಚಿದಾನಂದ ಹರಿಕಾಂತ, ಗಣಪತಿ ಪಟಗಾರ, ರಾಘವೇಂದ್ರ ಎಲ್ ಜಿ, ಗಿರೀಶ ಪಟಗಾರ, ಮಂಜುನಾಥ ಗೌಡ, ಜ್ಯೋತಿ ನಾಯ್ಕ, ಯಮುನಾ ಅಂಬಿಗ ಕಾರ್ಯಕ್ರಮ ಸಂಘಟಿಸಿದ್ದರು. ಊರಿನ ಪ್ರಮುಖರಾದ ರಾಘವೇಂದ್ರ ದೇಶಭಂಡಾರಿ, ಜಟ್ಟಿ ಮುಕ್ರಿ, ವಿನೋದ ಅಂಬಿಗ, ಆನಂದು ದೇಶಭಂಡಾರಿ, ವಿವೇಕ ನಾಯ್ಕ ಇತರರು ಹಾಜರಿದ್ದರು.