ಶಿರಸಿ: ಸ್ಕೂಟಿ ಹಾಗೂ ಬೈಕಿನ ನಡುವೆ ನಿರ್ಮಲಾ ನಗರದಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಸ್ಕೂಟಿ ಸವಾರ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆ ಹಾರಿ ಬಿದ್ದಿದ್ದರಿಂದ ಕಾರಿನ ಗಾಜುಗಳು ಒಡೆದಿವೆ. ಈ ಅಪಘಾತದಲ್ಲಿ ಇಬ್ಬರಿಗೆ ಪೆಟ್ಟಾಗಿದೆ.
ಶಿರಸಿ ಶಿವಳ್ಳಿಯ ಪವನ್ ಹಸ್ಲರ್ (19) ಚಲಿಸುತ್ತಿದ್ದ ಬೈಕು ಹುಸುರಿಯ ಅಬ್ದುಲ್ ಉಮರಸಾಬ ಚಲಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿದೆ. ಇದೇ ವೇಳೆ ಸೊರಬದ ಸೊರಬದ ಈರೇಶ ಬಿ ಅವರು ಬನವಾಸಿ ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದು, ಅಬ್ದುಲ್ ಅವರು ಕಾರಿನ ಮೇಲೆ ಬಿದ್ದು ಕಾರಿನ ಹಿಂದಿನ ಗಾಜುಗಳನ್ನು ಒಡೆದಿದ್ದಾರೆ.
ಬನವಾಸಿಯಿಂದ ಶಿರಸಿ ಕಡೆ ಪವನ್ ಹಸ್ಲರ್ ಬೈಕು ಓಡಿಸುತ್ತಿದ್ದರು. ಶಿರಸಿಯಿಂದ ಬನವಾಸಿ ಕಡೆ ಅಬ್ದುಲ್ ಉಮರಸಾಬ್ ಸ್ಕೂಟಿ ಓಡಿಸುತ್ತಿದ್ದರು. ನಿರ್ಮಲಾ ನಗರದಲ್ಲಿ ಡಿ 13ರ ರಾತ್ರಿ ಬೈಕು ಹಾಗೂ ಸ್ಕೂಟಿ ಡಿಕ್ಕಿಯಾಗಿದ್ದು, ಪವನ್ ಹಸ್ಲರ್ ರಸ್ತೆ ಮೇಲೆ ಬಿದ್ದು ಪೆಟ್ಟು ಮಾಡಿಕೊಂಡರು. ಅಬ್ದುಲ್ ಸ್ಕೂಟಿಯಿಂದ ಹಾರಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಹಿಂದೆ ಬಡಿದು ನೆಲಕ್ಕೆ ಬಿದ್ದರು.
ಈ ಅಪಘಾತದಲ್ಲಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಿನ ಗಾಜು ಒಡೆದಿರುವ ಕಾರಣ ಈರೇಶ ಬಿ ಅವರು ಬೈಕು ಹಾಗೂ ಸ್ಕೂಟಿ ಸವಾರರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.