ಶಿರಸಿ: ಕಾರು ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರನಿಗೆ ಪೆಟ್ಟಾಗಿದೆ.
ಶಿರಸಿಯ ಹೆಗಡೆಕಟ್ಟಾದ ಬಳಿ ಭಾನುವಾರ ಸಂಜೆ ಈ ಅಪಘಾತ ನಡೆದಿದೆ. ಡಸ್ಟರ್ ಕಾರು ಬೈಕ್ ಸವಾರನಿಗೆ ಗುದ್ದಿದ್ದು, ಬೈಕ್ ಸವಾರ ನೆಲಕ್ಕೆ ಅಪ್ಪಳಿಸಿದ್ದಾರೆ. ದಿನೇಶ ಗುತ್ಯ ಚಿನ್ನಯ್ಯ ಗಾಯಗೊಂಡ ಬೈಕ್ ಸವಾರ.
ದಿನೇಶ ಅವರು ದೇವನಳ್ಳಿಯಿಂದ ಹೆಗಡೆಕಟ್ಟಾದ ಕಡೆ ಬರುತ್ತಿದ್ದರು. ಹೆಗಡೆಕಟ್ಟಾ ತಲುಪುವ ವೇಳೆ ಈ ಅಪಘಾತ ನಡೆದಿದೆ. ಗಾಯಗೊಂಡ ದಿನೇಶ ಅವರನ್ನು ಸ್ಥಳೀಯರು ಉಪಚರಿಸಿದರು. ನಂತರ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.