ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ ನಡುವೆ ಅಡ್ಡಾದಿಡ್ಡಿ ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಗುದ್ದಿದ್ದು, ಎರಡು ಲಾರಿಗಳ ನಡುವೆ ನಡೆದ ಅಪಘಾತದಲ್ಲಿ ಎರಡೂ ವಾಹನಗಳು ಜಖಂ ಆಗಿದೆ.
ಕುಣಗಿನಕೊಪ್ಪ ಕ್ರಾಸಿನ ಬಳಿಯ ಆಕಾಶ ರೋಡ್ಲೈನ್ ಗ್ಯಾರೇಜ್ ಬಳಿ ಅಕ್ತರ್ ಅಲಿ ಎಂಬಾತ ತಾನು ಓಡಿಸುವ ಲಾರಿಯನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದ. ನ 22ರ ರಾತ್ರಿ ಬೆಳಗಾವಿಯ ಈರಣ್ಣ ಯಮ್ಮನಕಟ್ಟಿ ತಾನು ಓಡಿಸುತ್ತಿದ್ದ ಲಾರಿಯನ್ನು ನಿಂತಿದ್ದ ಲಾರಿಗೆ ಗುದ್ದಿದ. ಇದರಿಂದ ಎರಡು ಲಾರಿಗಳು ಜಖಂ ಆಗಿ, ಇತರೆ ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಯಿತು.
ಅಡ್ಡಾದಿಡ್ಡಿ ನಿಲ್ಲಿಸಿದ ಲಾರಿಯ ವ್ಯವಸ್ಥಾಪಕ ಸಂತೋಷ ವಡ್ಡರ್ ಸ್ಥಳಕ್ಕೆ ತೆರಳಿ ರಸ್ತೆಯ ಮೇಲಿದ್ದ ಅಪಘಾತದ ಲಾರಿಗಳನ್ನು ರಸ್ತೆ ಅಂಚಿಗೆ ನಿಲ್ಲಿಸಿದರು. ಪೊಲೀಸರು ಆಗಮಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು. ಎರಡು ಲಾರಿ ಚಾಲಕರ ವಿರುದ್ಧ ಸಂತೋಷ ವಡ್ಡರ್ ಪೊಲೀಸ್ ದೂರು ದಾಖಲಿಸಿದರು.