ಕುಮಟಾ: ಹಿರೆಗುತ್ತಿ ನುಶಿಕೋಟೆ ಕ್ರಾಸಿನ ಬಳಿ ನಡೆದ ಮ್ಯಾಕ್ಸಿಕ್ಯಾಬ್ ಅಪಘಾತದಲ್ಲಿ ಐದು ಜನ ಗಾಯಗೊಂಡಿದ್ದಾರೆ.
ನ 22ರಂದು ಧಾರವಾಡದ ಪ್ರಕಾಶ ಕುರಿಯವರ್ ಕುಮಟಾ ಅಂಕೋಲಾ ಕಡೆಗೆ ಮಾಕ್ಸಿಕ್ಯಾಬ್ ಓಡಿಸುತ್ತಿದ್ದರು. ರಸ್ತೆ ಎಡಬದಿ ಕಟ್ಟೆ’ಗೆ ಅವರ ವಾಹನ ಡಿಕ್ಕಿಯಾಯಿತು.
ಪರಿಣಾಮ ಪ್ರಕಾಶ ಅವರ ಜೊತೆ ಅವರ ಪತ್ನಿ ರೇಣುಕಾ, ಮಕ್ಕಳಾದ ಮೇಘಾ, ವರ್ಷಿಣಿ ಹಾಗೂ ವಾಹನದಲ್ಲಿದ್ದ ಸಾವಿತ್ರಿ ಸೂರ್ಯವಂಶಿ ಗಾಯಗೊಂಡರು. ಪೊಲೀಸರು ಪ್ರಕರಣ ದಾಖಲಿಸಿಕೊಂಡರು