ಶಿರಸಿ: ಹೆಲ್ಮೇಟ್ ಇಲ್ಲದೇ ಬೈಕ್ ಓಡಿಸುತ್ತಿದ್ದ ಹಕ್ಕಿಮನೆ ಪ್ರಶಾಂತ ಹೆಗಡೆ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ.
ಶಿರಸಿ ತಾಲೂಕಿನ ಹುಳಗೋಳ ಹಕ್ಕಿಮನೆಯ ಪ್ರಶಾಂತ ಶ್ರೀಪಾದ ಹೆಗಡೆ (40) ಅವರು ಡಿ 20ರ ಮಧ್ಯಾಹ್ನ ಶಿರಸಿಯಿಂದ ತಾರಗೋಡು ಕಡೆ ಅವರು ಬೈಕ್ ಓಡಿಸುತ್ತಿದ್ದರು. ತಾರಗೋಡಿನ ಕ್ಷೇತ್ರಪಾಲ ದೇಗುಲದ ಸೇತುವೆ ಬಳಿಯಿದ್ದ ಕಲ್ಲಿಗೆ ಅವರು ಬೈಕ್ ಗುದ್ದಿದರು. ಪರಿಣಾಮ ಬೈಕಿನಿಂದ ಬಿದ್ದ ಅವರು ತಲೆಗೆ ಪೆಟ್ಟು ಮಾಡಿಕೊಂಡರು.
ಮೈ-ಕೈ’ಗೆ ಗಾಯ ಮಾಡಿಕೊಂಡಿದ್ದ ಪ್ರಶಾಂತ ಹೆಗಡೆ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದರು. ತಾರಗೋಡಿನ ವ್ಯಾಪಾರಿ ರಾಜೇಶ ಶೆಟ್ಟಿ ಜೊತೆ ಅನೇಕರು ಅವರನ್ನು ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಪರೀಕ್ಷಿಸಿದ ವೈದ್ಯರು ಪ್ರಶಾಂತ ಹೆಗಡೆ ಸಾವನಪ್ಪಿದ ವಿಷಯ ತಿಳಿಸಿದರು.
ಹೆಲ್ಮೇಟ್ ಧರಿಸಿ.. ಬೈಕ್ ಚಲಾಯಿಸಿ