ಕುಮಟಾ: ಬಗ್ಗೋಣದ ಗಣೇಶ ಜಟ್ಟಿ ಮುಕ್ರಿ (32) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಈಚೆಗೆ ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ. ಸದಾ ಸರಾಯಿ ಕುಡಿದು ನಶೆಯಲ್ಲಿರುತ್ತಿದ್ದರು. ನ 10ರಂದು ಮನೆಯಲ್ಲಿದ್ದ ಅವರು ಜಂತಿಗೆ ಸೀರೆಯಿಂದ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾರೆ. ಗಣೇಶರ ಸಹೋದರಿ ಕಲಾವತಿ ಮುಕ್ರಿ ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.