ದಾoಡೇಲಿ ಪೆಪರ್ ಮಿಲ್’ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಅಗಡಿ ವಿಪರೀತ ಸರಾಯಿ ಸೇವನೆಯಿಂದ ಸಾವನಪ್ಪಿದ್ದಾರೆ.
ದಾಂಡೇಲಿ ಗಾಂಧಿನಗರದ ಆಶ್ರಯ ಕಾಲೋನಿಯಲ್ಲಿ ನಾಗರಾಜ ಅಗಡಿ (36) ವಾಸವಾಗಿದ್ದರು. ಪೆಪರ್ ಮಿಲ್ಲಿನಲ್ಲಿ ಅವರಿಗೆ ಲೋಡಿಂಗ್ ಕೆಲಸ ಸಾಕಷ್ಟು ಪ್ರಮಾಣದಲ್ಲಿತ್ತು. ಕೆಲಸಕ್ಕೆ ತಕ್ಕ ವೇತನ ಸಹ ಸಿಗುತ್ತಿತ್ತು. ಆದರೆ, ಸರಾಯಿ ಸೇವನೆಯ ಚಟ ನಾಗರಾಜ ಅಗಡಿ ಅವರ ಬದುಕನ್ನು ಕಿತ್ತುಕೊಂಡಿತು. ಅವರ ಕುಟುಂಬದವರನ್ನು ಸಹ ಅತಂತ್ರರನ್ನಾಗಿ ಮಾಡಿತು.
ವಿಪರೀತ ಸರಾಯಿ ಕುಡಿಯುವುದನ್ನು ಕಲಿತ ನಾಗರಾಜ ಅಗಡಿ ಕಳೆದ 2 ತಿಂಗಳಿನಿAದ ಕೆಲಸಕ್ಕೆ ಹೋಗಿರಲಿಲ್ಲ. ನಿತ್ಯ ಮದ್ಯ ಸೇವನೆಯನ್ನು ರೂಢಿಸಿಕೊಂಡಿದ್ದರು. ಫೆ 18ರಂದು ಬ್ಯಾಂಕಿಗೆ ಹೋಗಿ ಬರುವುದಾಗಿ ಹೇಳಿ ಹೋದ ಅವರು ಮಾರುತಿನಗರದಲ್ಲಿ ಬಿದ್ದಿದ್ದರು. ಮದ್ಯದ ನಶೆಯಲ್ಲಿ ಬಿದ್ದ ನಾಗರಾಜ ಅಗಡಿ ಅವರನ್ನು ಅವರ ಪತ್ನಿ ಚಂದ್ರಕಲಾ ಅಗಡಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರು.
ಆದರೆ, ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಅವರು ಸಾವನಪ್ಪಿದರು. ವೈದ್ಯರು ಸಾವು ದೃಢೀಕರಿಸಿದ ನಂತರ ಚಂದ್ರಕಲಾ ಅಗಡಿ ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.