ಕಾರವಾರ: ನಗರ ವ್ಯಾಪ್ತಿಗೆ ಒಳಪಡುವ ಗುಡ್ಡಳ್ಳಿಗೆ ರಸ್ತೆ ಸಂಪರ್ಕ ಇಲ್ಲದ ಕಾರಣ ಅಲ್ಲಿ ಸಾವನಪ್ಪಿದವರ ಶವವನ್ನು ಕಟ್ಟಿಗೆಯಲ್ಲಿ ಕಟ್ಟಿ ಸ್ಮಶಾನಕ್ಕೆ ತರಲಾಗಿದೆ. ಶವ ಸಾಗಾಟಕ್ಕೆ ಮುಕ್ತಿ ವಾಹನ ಸಂಚರಿಸಲು ಸಾಧ್ಯವಿಲ್ಲದ ಕಾರಣ ಊರಿನ ಯುವಕರು ಕಟ್ಟಿಗೆಗೆ ಶವ ಕಟ್ಟಿ 4 ಕಿಮೀ ಹೆಗಲ ಮೇಲೆ ಹೊತ್ತರು.
ರಾಮಾ ಮುನ್ನ ಗೌಡ ಎಂಬಾತರು ಹೃದಯಘಾತದಿಂದ ಸಾವನಪ್ಪಿದ್ದರು. ಅವರ ಅಂತ್ಯ ಸಂಸ್ಕಾರಕ್ಕೆ ಸಮಸ್ಯೆಯಾಗಿದ್ದು ಸ್ಮಶಾನಕ್ಕೆ ಹರಸಾಹಸ ಪಡಬೇಕಾಯಿತು. ಈ ಊರಿಗೆ ರಸ್ತೆ ನಿರ್ಮಿಸಿಕೊಡಿ ಎಂದು ಜನ ಸಾಕಷ್ಟು ಬೇಡಿಕೆ ಸಲ್ಲಿಸಿದರೂ ಸಾಧ್ಯವಾಗಿರಲಿಲ್ಲ. ಊರಿಗೆ ತೆರಳಲು ಕಾಲುದಾರಿ ಮಾತ್ರವಿದ್ದು, ಬೈಕ್ ಸಂಚಾರ ಸಹ ಇಲ್ಲಿ ಅತ್ಯಂತ ಕಷ್ಟಕರ.
ಇನ್ನೂ ಮಳೆಗಾಲದ ಅವಧಿಯಲ್ಲಿ ಊರಿಗೆ ತೆರಳುವುದೇ ದೊಡ್ಡ ಸಾಹಸ. ಹೀಗಿರುವಾಗ ಅನಿವಾರ್ಯಕ್ಕೆ ಸಿಲುಕಿದ ಊರಿನವರು ಶವವನ್ನು ಕೋಲಿಗೆ ಕಟ್ಟಿ ಒಬ್ಬರಾದ ಮೇಲೆ ಒಬ್ಬರಂತೆ ಪಾಳಿ ಪ್ರಕಾರ ಗುಡ್ಡದ ಕೆಳಗಿನ ಪ್ರದೇಶಕ್ಕೆ ತಂದರು. ಗುಡ್ಡದ ಕೆಳಗಿನವರೆಗೆ ಶವ ಸಾಗಿಸಿದ ನಂತರ ಮುಕ್ತಿ ವಾಹನದ ಮೂಲಕ ಸ್ಮಶಾನಕ್ಕೆ ಒಯ್ಯಲಾಯಿತು.
ಶವ ಸಾಗಾಟಕ್ಕೆ ಊರಿನವರು ಎದುರುಸಿದ ಸಮಸ್ಯೆಯ ವಿಡಿಯೋ ಇಲ್ಲಿ ನೋಡಿ..