ಹೊನ್ನಾವರ: ಅತಿಕ್ರಮಣದಾರರು ಹಾಗೂ ಅಧಿಕಾರಿಗಳ ನಡುವೆ ಸಾಮರಸ್ಯ ಕಾಪಾಡುವುದದಕ್ಕಾಗಿ ಹೊನ್ನಾವರದಲ್ಲಿ ಕರೆದಿದ್ದ ಸಭೆ ವಿಫಲವಾಗಿದೆ. ಉತ್ತರ ಕನ್ನಡ ಜಿಲ್ಲೆಯ ನಾಲ್ಕು ದಿಕ್ಕಿನಿಂದ ಅತಿಕ್ರಮಣದಾರರು ಸಭೆಗೆ ಹಾಜರಾಗಿದ್ದರೂ ಅರಣ್ಯ ಅಧಿಕಾರಿಗಳು ಅಲ್ಲಿ ಬರಲಿಲ್ಲ. ಹೀಗಾಗಿ ಅತಿಕ್ರಮಣದಾರರು ಹೋರಾಟ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದು ಸಭೆಯನ್ನು ಅಲ್ಲಿಗೆ ಮೊಟಕುಗೊಳಿಸಲಾಯಿತು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದಾರರ ಮೇಲೆ ಪದೇ ಪದೇ ಅರಣ್ಯ ಸಿಬ್ಬಂದಿ ದೌರ್ಜನ್ಯ ನಡೆಯುತ್ತಿದೆ. ಕಾನೂನು ಹಾಗೂ ನಿಯಮ ಉಲ್ಲಂಘಿಸಿ ಜನರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಈ ಬಗ್ಗೆ ಅರಣ್ಯವಾಸಿಗಳ ಸಮಕ್ಷೇಮದಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ಹೊನ್ನಾವರದಲ್ಲಿ `ಸಮಸ್ಯೆ-ಸ್ಪಂದನೆ’ ಎಂಬ ಸಭೆ ಸಂಘಟಿಸಲಾಗಿತ್ತು. 10 ದಿನ ಮುಂಚಿತವಾಗಿ ಎಲ್ಲಾ ಹಂತದ ಅಧಿಕಾರಿಗಳಿಗೆ ಹೋರಾಟಗಾರ ರವೀಂದ್ರ ನಾಯ್ಕ ಆಮಂತ್ರಣ ನೀಡಿದ್ದರು. ಅರಣ್ಯಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಸಭೆಗೆ ಆಹ್ವಾನಿಸುವಂತೆ ಆಮಂತ್ರಿಸಿದ್ದರು. `ಕಾನೂನು ಅಂಶಗಳ ಗೊಂದಲಕ್ಕೆ ಈ ಸಭೆಯಲ್ಲಿ ಪರಿಹಾರ ಹುಡುಕೋಣ’ ಎಂದು ಹೇಳಿ ಬಂದಿದ್ದರು.
ಈ ಹಿನ್ನಲೆ ಅರಣ್ಯ ಅಧಿಕಾರಿಗಳಸಹಿತ ವಿವಿಧ ಇಲಾಖೆ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ, ಶನಿವಾರ ನಡೆದ ಈ ಸಭೆಯಲ್ಲಿ ಅರಣ್ಯ ಸಿಬ್ಬಂದಿಗಿoತಲೂ ಪೊಲೀಸ್ ಅಧಿಕಾರಿ – ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅರಣ್ಯ ಅತಿಕ್ರಮಣದಾರರು ಇದನ್ನು ವಿರೋಧಿಸಿ ಹಿರಿಯ ಅಧಿಕಾರಿಗಳ ಆಗಮನಕ್ಕಾಗಿ ಪಟ್ಟು ಹಿಡಿದರು. ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಮೊದಲ ಹಂತದ ಸಭೆ ನಡೆದಿದ್ದು, ಅದಕ್ಕೆ ಅತಿಕ್ರಮಣದಾರರು ಬಗ್ಗಲಿಲ್ಲ. ತಹಶೀಲ್ದಾರ್ ಪ್ರವೀಣ ಎಸ್ ಕರಾಂಡೆ ನೇತ್ರತ್ವದಲ್ಲಿ ಇನ್ನೊಂದು ಸಭೆ ನಡೆಯಿತು.
ಹೋರಾಟಗಾರರಾದ ಮಂಜುನಾಥ ಮರಾಠಿ, ಇಬ್ರಾಹಿಂ ಗೌಡಳ್ಳಿ, ದೇವರಾಜ ಗೊಂಡ, ಮಹೇಶ ನಾಯ್ಕ ಕಾನಕ್ಕಿ, ರಾಮ ಮರಾಠಿ, ಅನಂತ ನಾಯ್ಕ ಯಲ್ಲಾಪುರ, ಭೀಮಶಿ ವಾಲ್ಮೀಕಿ ಕಿರುವತ್ತಿ, ಆನಂದ ಗೌಡ ಅಂಕೋಲಾ, ಶಾರಂಬಿ ಶೇಕ್, ಚಂದ್ರಕಾoತ ನಾಯ್ಕ ಬೆಳಕೆ, ಪಾಂಡುರAಗ ನಾಯ್ಕ ಭಟ್ಕಳ, ಚಂದ್ರಕಾoತ ಕೊಚಡೆಕರ್, ಸುರೇಶ ತಾಡೇಂಲ್, ಸುರೇಶ ನಾಯ್ಕ ನಗರಬಸ್ತೀಕೇರಿ, ವಿನೋದ ನಾಯ್ಕ, ಅಣ್ಣಪ್ಪ ನಾಯ್ಕ ತಮ್ಮ ಭಾಗದ ಜನರೊಂದಿಗೆ ಹೊನ್ನಾವರಕ್ಕೆ ಬಂದಿದ್ದರು. ಅರಣ್ಯ ಅಧಿಕಾರಿಗಳು ಬಾರದೇ ಸಭೆ ಅಂತ್ಯವಾದ ಕಾರಣ ಈ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೆ ಅರಣ್ಯವಾಸಿಗಳ ಸಮಸ್ಯೆ ಬಗ್ಗೆ ಚರ್ಚಿಸಲು ಮತ್ತೊಮ್ಮೆ ಸಭೆ ಕರೆಯುವ ಬಗ್ಗೆ ನಿರ್ಧರಿಸಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಹಾಜರಿದ್ದು ಇದಕ್ಕೆ ತಲೆಯಾಡಿಸಿದರು. `ಅರಣ್ಯವಾಸಿಗಳ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮವಾಗಬೇಕು’ ಎಂದು ಅತಿಕ್ರಮಣದಾರರು ಪಟ್ಟುಹಿಡಿದರು. `ಭೂಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಮೇಲೆ ವಿಶೇಷ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿರುವದನ್ನು ಖಂಡಿಸಿದರು.