ಸಾಹಸ ಪ್ರವೃತ್ತಿ ಮೈಗೂಡಿಸಿಕೊಂಡಿರುವ ಕೃಷಿ ಕಾರ್ಮಿಕರಾದ ಕೊನೆ ಗೌಡರಿಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಈ ವರ್ಷವೂ ಸ್ವಂತ ವೆಚ್ಚದಲ್ಲಿ ಜೀವ ವಿಮೆ ಮಾಡಿಸಿದ್ದಾರೆ. ಶಿರಸಿ ಟಿಆರ್ಸಿ ಭವನದಲ್ಲಿ 300ಕ್ಕೂ ಅಧಿಕ ಕೊನೆ ಗೌಡರಿಗೆ 10 ಲಕ್ಷ ರೂ ಮೌಲ್ಯದ ಅಂಚೆ ವಿಮೆ ಮಾಡಿಸಿದ ಅನಂತಮೂರ್ತಿ ಹೆಗಡೆ ಅದರ ಮೊದಲ ಕಂತನ್ನು ಬುಧವಾರ ಪಾವತಿಸಿದರು.
`ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದುಡಿಯುವ ವರ್ಗಕ್ಕಾಗಿ ಭಾರತೀಯ ಅಂಚೆ ಇಲಾಖೆಯಲ್ಲಿ ವಿಮಾ ಯೋಜನೆಗಳಿದ್ದು, ಶ್ರಮಿಕರು ಅದರ ಪ್ರಯೋಜನಪಡೆಯಬೇಕು’ ಎಂದವರು ಕರೆ ನೀಡಿದರು. `ಆಕಸ್ಮಿಕ ಮರಣ ಉಂಟಾದಾಗ ಕುಟುಂಬದವರು ಸಾಕಷ್ಟು ಕುಗ್ಗುತ್ತಾರೆ. ಆರ್ಥಿಕವಾಗಿ ಸಹ ಕುಟುಂಬದವರು ಸಂಕಷ್ಟ ಎದುರಿಸಲಿದ್ದು, ಅದನ್ನು ತಪ್ಪಿಸುವುದಕ್ಕಾಗಿ ಪ್ರತಿಯೊಬ್ಬರು ವಿಮೆಗೆ ಒಳಪಡಬೇಕು’ ಎಂದು ಕರೆ ನೀಡಿದರು. `ಪ್ರಸ್ತುತ ವಿಮೆಗೆ ಒಳಪಟ್ಟ ಎಲ್ಲರೂ ಮುಂದಿನ ವರ್ಷ ವಿಮಾ ಕಂತು ಪಾವತಿಸಿ ಯೋಜನೆಯನ್ನು ಚಾಲ್ತಿಯಲ್ಲಿರಿಸಿಕೊಳ್ಳಬೇಕು’ ಎಂದು ಹೇಳಿದರು.
ಬಿಜಪಿ ಜಿಲ್ಲಾಧ್ಯಕ್ಷ ಮುಖಂಡ ಎನ್.ಎಸ್.ಹೆಗಡೆ ಕರ್ಕಿ ಹೇಳಿದರು. ಟಿಆರ್ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಭಾರತೀಯ ಅಂಚೆ ಇಲಾಖೆಯ ವಿಬಾಬಗ ಅಧೀಕ್ಷಕ ಹೂವಪ್ಪ, ಕೃಷಿಕ ವಿ ಎಂ ಹೆಗಡೆ ಕಬ್ಬೆ, ಹಿರಿಯ ಸಹಕಾರಿ ಎಸ್ ಎನ್ ಹೆಗಡೆ ದೊಡ್ನಳ್ಳಿ, ರಮೇಶ ನಾಯ್ಕ ಕುಪ್ಪಳ್ಳಿ, ಉಷಾ ಹೆಗಡೆ, ತಿಮ್ಮಪ್ಪ ಮಡಿವಾಳ ಸಿದ್ದಾಪುರ, ಪ್ರಸಾದ ಹೆಗಡೆ ಯಲ್ಲಾಪುರ ಇತರರಿದ್ದರು.