ಯಲ್ಲಾಪುರ ಹಾಗೂ ಹೊನ್ನಾವರದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರ ದಾಳಿ ಮುಂದುವರೆದಿದೆ. ಯಲ್ಲಾಪುರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಹಾಗೂ ಹೊನ್ನಾವರದಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸಿಕ್ಕಿ ಬಿದ್ದಿದ್ದು, ಯಲ್ಲಾಪುರದಲ್ಲಿ ಪೊಲೀಸರು ದಾಳಿ ನಡೆಸಿದಾಗ ಎಂಟು ಜೂಜುಕೋರರು ಕಾಡಿನಲ್ಲಿ ತಪ್ಪಿಸಿಕೊಂಡಿದ್ದಾರೆ.
ಮಾರ್ಚ 12ರ ರಾತ್ರಿ ಕಿರವತ್ತಿ ಬಳಿಯ ಕಾರೆವಾಡ ಸರ್ಕಾರಿ ಶಾಲೆ ಹಿಂದಿನ ಅರಣ್ಯ ಪ್ರದೇಶದಲ್ಲಿ 10 ಜನ ಇಸ್ಪೀಟ್ ಆಡುತ್ತಿದ್ದರು. ಈ ವಿಷಯ ಅರಿತ ಯಲ್ಲಾಪುರ ಪಿಎಸ್ಐ ಸಿದ್ದಪ್ಪ ಗುಡಿ ರಾತ್ರಿ 11.30ಕ್ಕೆ ಅಲ್ಲಿ ದಾಳಿ ನಡೆಸಿದರು. ಆಗ ಹೊಸಳ್ಳಿ ಹದ್ದಿನಸರದ ಕೂಲಿ ಕಾರ್ಮಿಕ ವಿನಾಯಕ ನಾಯಕ ಹಾಗೂ ಹೊಸಳ್ಳಿಯ ದಾವಲ್ ರುಸ್ತುಂಸಾಬ್ ಸಿಕ್ಕಿಬಿದ್ದರು.
ಅವರ ಬಳಿಯಿದ್ದ ಇಸ್ಪಿಟ್ ಎಲೆ, 3940ರೂ ಹಣ ಸೇರಿ ವಿವಿಧ ಪರಿಕ್ಕರಗಳನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸರನ್ನು ಕಂಡ ಕಿರವತ್ತಿಯ ಬಸು ಹರಿಜನ, ಅಡ್ಕೇರಿಯ ತುಕಾರಾಮ ವರಕ್, ಕಿರವತ್ತಿಯ ಕೃಷ್ಣ ತೋರಸ್ಕರ್, ಹೊಸಳ್ಳಿಯ ಪಾಂಡು ಹುಬೆ, ಕಾರೆವಾಡದ ಬಾಬು ಪಟಗಾರೆ, ನವಿಲು ಎಡಗೆ, ಶ್ರೀಪತಿ ಕೋಟರಕರ್ ಹಾಗೂ ಕಿರವತ್ತಿಯ ಜಾಪರ್ ಜಮಖಂಡಿ ಓಡಿ ಪರಾರಿಯಾದರು.
ಇನ್ನೂ ಹೊನ್ನಾವರ ರಾಮತೀರ್ಥ ರಾಮೇಶ್ವರ ದೇವಸ್ಥಾನದ ಮುಂದಿನ ಅರಣ್ಯ ಪ್ರದೇಶದಲ್ಲಿ ನಾಲ್ವರು ಅಂದರ್ ಬಾಹರ್ ಆಡುತ್ತಿದ್ದರು. ಈ ವಿಷಯ ಅರಿತು ಫೆ 13ರ ಬೆಳಗ್ಗೆ ಪಿಎಸ್ಐ ಮಂಜುನಾಥ ಅವರು ಅಲ್ಲಿ ದಾಳಿ ನಡೆಸಿದರು. ಆಗ, ತುಳಸಿನಗರದ ಮೀನುಗಾರ ಯಶವಂತ ಮೇಸ್ತಾ, ಗಣಪತಿ ಮೇಸ್ತಾ, ದಿನೇಶ ಮೇಸ್ತಾ ಹಾಗೂ ಪ್ರಕಾಶ ಮೇಸ್ತಾ ಸಿಕ್ಕಿ ಬಿದ್ದರು. ಅವರ ಬಳಿಯಿದ್ದ 1050ರೂ ಹಣ ಹಾಗೂ ಇಸ್ಪಿಟ್ ಪರಿಕ್ಕರಗಳನ್ನು ಪೊಲೀಸರು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.