ಯಲ್ಲಾಪುರ ಹಾಗೂ ಕುಮಟಾದಲ್ಲಿ ಪೊಲೀಸರು ಜಾಗೃತಿ ಮೂಡಿಸಿದರೂ ಜೂಜಾಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಹೀಗಾಗಿ ಇಸ್ಪಿಟ್ ಎಲೆಗಳನ್ನು ಹರಡಿಕೊಂಡು ಹಣ ಹಂಚಿಕೊಳ್ಳುತ್ತಿದ್ದವರ ಮೇಲೆ ಮತ್ತೆ ಪೊಲೀಸರು ದಾಳಿ ಮಾಡಿದ್ದಾರೆ.
ಮಾರ್ಚ 8ರ ರಾತ್ರಿ 10 ಗಂಟೆಯ ಆಸುಪಾಸಿಗೆ ಯಲ್ಲಾಪುರದ ಮಂಚಿಕೇರಿಯ ಜನತಾ ಕಾಲೋನಿ ಹಿಂದಿನ ಉರ್ದು ಶಾಲೆ ಬಳಿ ಆರು ಜನ ಜೂಜಾಡುತ್ತಿದ್ದರು. ರಾತ್ರಿ ಕರ್ತವ್ಯದಲ್ಲಿದ್ದ ಪಿಎಸ್ಐ ಸಿದ್ದಪ್ಪ ಗುಡಿ ಅವರ ಮೇಲೆ ದಾಳಿ ನಡೆಸಿದರು.
ಮಂಚಿಕೇರಿ ಜನತಾ ಕಾಲೋನಿಯ ಕೂಲಿ ಕೆಲಸಗಾರರಾದ ಪ್ರಭಾಕರ ನಾಯ್ಕ, ರಾಜೇಶ ನಾಯ್ಕ, ರಾಘವೇಂದ್ರ ನಾಯ್ಕ, ಶ್ರೀಧರ ನಾಯ್ಕ, ಅಕ್ಬರ್ ಸಯ್ಯದ್ ಹಾಗೂ ಕುಮಟಾ ಹಿರೆಗುತ್ತಿಯ ಸೆಂಟ್ರಿoಗ್ ಕೆಲಸಗಾರ ಮಹೇಂದ್ರ ಆಚಾರಿ ಸಿಕ್ಕಿಬಿದ್ದರು. ಅವರು ಹರಡಿಕೊಂಡಿದ್ದ 5510ರೂ ಹಣದ ಜೊತೆ ಇನ್ನಿತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದರು.
ಮಾರ್ಚ 8ರ ರಾತ್ರಿ 11 ಗಂಟೆ ವೇಳೆಗೆ ಕುಮಟಾ ನೆಹರುನಗರದಲ್ಲಿ ಸಹ ಭಾರೀ ಪ್ರಮಾಣದಲ್ಲಿ ಜೂಜಾಟ ನಡೆದಿತ್ತು. ಅಲ್ಲಿನ ಗದ್ದೆ ಬಯಲಿನಲ್ಲಿ 10ಕ್ಕೂ ಅಧಿಕ ಜನ ಸೇರಿ ಅಂದರ್ ಬಾಹರ್ ಆಡುತ್ತಿದ್ದರು. ಪಿಎಸ್ಐ ಪಟ್ಟಣ ಶೆಟ್ಟಿ ಅಲ್ಲಿ ದಾಳಿ ನಡೆಸಿದಾಗ 10 ಜನ ಸಿಕ್ಕಿ ಬಿದ್ದರು. ಉಳಿದವರು ಓಡಿ ಪರಾರಿಯಾದರು.
ಕುಮಟಾ ಅಪ್ಪಿಓಣಿಯ ಪಾನ್ಶಾಪ್ ಮಾಲಕ ಸುರೇಶ ಗೌಡ, ಉಪ್ಪಿನಗಣಪತಿ ಬಳಿಯ ಪೆಂಟಿoಗ್ ಕೆಲಸಗಾರ ರಾಘವೇಂದ್ರ ಗೌಡ, ಅದೇ ಊರಿನ ಕೂಲಿ ಕೆಲಸ ಮಾಡುವ ಬೀರಾ ಗೌಡ, ಅಪ್ಪಿಓಣಿಯ ಪೇಂಟರ್ ತುಕಾರಾಮ ಗೌಡ, ಬಾಡ ಊರಿನ ಚಾಲಕ ಕಮಲಾಕರ ಗೌಡ, ಉಪ್ಪಿನಗಣಪತಿಯ ರಿಕ್ಷಾ ಚಾಲಕ ಗಣಪತಿ ಗೌಡ, ಅದೇ ಊರಿನ ಕೂಲಿ ಕೆಲಸಗಾರ ಮೋಹನ ಗೌಡ, ಮಂಜುನಾಥ ಗೌಡ, ಕೇಬಲ್ ಕೆಲಸ ನೆಟ್ವರ್ಕ ಕೆಲಸ ಮಾಡುವ ಲಕ್ಷಣ ಗೌಡ ಸಿಕ್ಕಿ ಬಿದ್ದರು.
ಸಿಕ್ಕಿ ಬಿದ್ದವರ ಬಳಿಯಿದ್ದ 4800ರೂ ಹಣ ಹಾಗೂ ಇನ್ನಿತರ ಸಾಮಗ್ರಿ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿದರು. ಈ ಎಲ್ಲರೂ ಅಕ್ರಮವಾಗಿ ಬೇಗ ದುಡ್ಡು ಮಾಡುವ ಆಸೆಯಿಂದ ಜೂಜಾಟದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡರು.