ಭಟ್ಕಳ: ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಏಳು ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಭಟ್ಕಳದ ಗೊರಟೆ ಶರಜ್ಜಿಮನೆಯ ಅರಣ್ಯ ಪ್ರದೇಶದಲ್ಲಿ ಬೈಂದೂರಿನ ಬಶೀರ ಅಹ್ಮದ, ಭಟ್ಕಳ ಕರಿಕಲ್ ಹೊನ್ನಯ್ಯನಮನೆಯ ನಾಗರಾಜ ಮೋಗೇರ್, ಮಾವಿನಕೂರ್ವಾದ ಪ್ರದೀಪ್ ಮೋಗೇರ್ ಇಸ್ಪಿಟ್ ಆಡುತ್ತಿದ್ದರು. ಹೆಬಳೆಯ ಜಯರಾಜ್ ಮೊಗೇರ್, ಉಡುಪಿಯ ಪ್ರವೀಣ ದೇವಾಡಿಗ, ಮಂಜುನಾಥ ದೇವಾಡಿಗ ಹಾಗೂ ಇಜಾಜ್ ಮೊಮೀನ್ ಅವರ ಜೊತೆ ಸೇರಿಕೊಂಡಿದ್ದರು.
ಈ ಎಲ್ಲರೂ ಸೇರಿ ಇಸ್ಪಿಟ್ ಎಲೆಗಳ ಜೊತೆ ಹಣ ಹರಡಿಕೊಂಡು ಆಡುತ್ತಿದ್ದಾಗ ಪೊಲೀಸ್ ಉಪನಿರೀಕ್ಷಕ ಭರಮಪ್ಪ ಬೆಳಗಲಿ ದಾಳಿ ನಡೆಸಿದರು. ಇಸ್ಪಿಟ್ ಎಲೆ, ಹಣದ ಜೊತೆ ಅವರೆಲ್ಲರನ್ನು ವಶಕ್ಕೆ ಪಡೆದು ಪೊಲೀಸ್ ಜೀಪ್ ಹತ್ತಿಸಿದರು. ಠಾಣೆಗೆ ಹೋದ ನಂತರ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿದರು.