ಹಳಿಯಾಳ ಪಟ್ಟಣದ ಗೋರಿಖಾನ್ ಪೆಟ್ರೋಲ್ ಬಂಕ್ ಬಳಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಐದು ಜನ ಜೂಜುಕೋರರು ಸಿಕ್ಕಿ ಬಿದ್ದಿದ್ದು, ಇಬ್ಬರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಅವರನ್ನು ಸಹ ಹುಡುಕುತ್ತಿದ್ದಾರೆ. ಫೆ 22ರ ರಾತ್ರಿ ಮಹಮದ್ ಅಲಿ ರಸ್ತೆಯ ಹಾಶಂಪಿರ ಲತಪನವರ್, ಮಹಮದ್ ಗೌಸ್ ತಲೀಪ, ಕಸಬಾ ಗಲ್ಲಿಯ ಪಯಾಬ್ ಬಂಕಾಪುರ, ಹಸೂರು ಗಲ್ಲಿಯ ಪಯಾಜ್ ಶೇಖ್, ಆಶ್ರಯ ನಗರದ ಮುಜಾಪರ ಶೇಖ್ ಜೊತೆ ಮಹಮದ್ ಅಲಿ ರಸ್ತೆಯ ಇಲಿಯಾಸ ಅಂಕೋಲೆಕರ್ ಹಾಗೂ ಹೊಸೂರು ಗಲ್ಲಿಯ ಸಂತೋಷ ದಂಡಿ ಇಸ್ಪಿಟ್ ಆಡುತ್ತಿದ್ದರು.
ಹಳಿಯಾಳ ಪೊಲೀಸ್ ಠಾಣೆಯ ಪಿಎಸ್ಐ ವಿನೋದ ಎಸ್ ಕೆ ಅವರ ಮೇಲೆ ದಾಳಿ ನಡೆಸಿದರು. ಪೊಲೀಸರನ್ನು ನೋಡಿದ ಇಲಿಯಾಸ ಅಂಕೋಲೆಕರ್ ಹಾಗೂ ಸಂತೋಷ ದಂಡಿ ಓಡಿ ಪರಾರಿಯಾದರು. ಉಳಿದ ಐದು ಜನ ಸಿಕ್ಕಿಬಿದ್ದರು. ಜೂಜಾಟದ ಸಾಮಗ್ರಿಗಳನ್ನು ವಶಕ್ಕೆ ಪಡೆದ ಪೊಲೀಸರು ಆ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದರು.