ಕರಾವಳಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿತದ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ನಿಧಾನವಾಗಿದೆ.
ಈ ನಡುವೆ ಹೆದ್ದಾರಿ ಮೇಲಿನ ಮಣ್ಣಿನ ಅಡಿ ಸಿಲುಕಿದ್ದ ದೊಡ್ಡ ದೊಡ್ಡ ಬಂಡೆಗಳು ಯಂತ್ರೋಪಕರಣಗಳ ಓಡಾಟಕ್ಕೆ ಅವಕಾಶ ನೀಡುತ್ತಿಲ್ಲ. ಗುಡ್ಡದ ಮಣ್ಣಿನ ಜೊತೆ ಅಲ್ಲಿನ ಮರ-ಬಂಡೆಗಳು ಹೆದ್ದಾರಿಗೆ ಅಪ್ಪಳಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುವವರಿಗೆ ಶುಕ್ರವಾರ ದೊಡ್ಡ ದೊಡ್ಡ ಬಂಡೆಗಳು ಎದುರಾಗಿದೆ. ಪ್ರಸ್ತುತ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿಟಾಚಿ ಆಪರೇಟರ್’ಗಳು ಸಣ್ಣ-ಪುಟ್ಟ ಬಂಡೆಗಳನ್ನು ಸರಿಸಿಕೊಂಡು ಮಣ್ಣನ್ನು ಬಿಡಿಸುತ್ತಿದ್ದಾರೆ. ಗುಡ್ಡದ ಮೇಲಿನಿಂದ ಸಣ್ಣ ಪ್ರಮಾಣದಲ್ಲಿ ಮಣ್ಣು ಮಿಶ್ರಿತ ರಾಡಿ ಬೀಳುತ್ತಿರುವುದು ಸಹ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮಣ್ಣಿನ ರಾಡಿ ಅಧಿಕವಾಗಿರುವುದರಿಂದ ಟಿಪ್ಪರ್ ಓಡಾಟ ಸಹ ಸುರಳಿತವಾಗಿಲ್ಲ.
ಹೆದ್ದಾರಿ ಮೇಲೆ ಬಿದ್ದಿರುವ ಬಂಡೆ ಹಾಗೂ ಈಗಿನ ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ..
Discussion about this post