ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬoಧಿಸಿ ಈವರೆಗೆ 10 ಜನ ಸಾವನಪ್ಪಿರುವುದು ಖಚಿತವಾಗಿದೆ. ಮೊದಲು 7 ಜನ ಸಾವನಪ್ಪಿರುವ ಬಗ್ಗೆ ಶಂಕಿಸಲಾಗಿದ್ದು, ಇದೀಗ 10 ಜನ ಮಣ್ಣಿನ ಅಡಿ ಸಿಲುಕಿ ಸಾವನಪ್ಪಿರುವುದು ಖಚಿತವಾಗಿದೆ. ಇದರಲ್ಲಿ ಚಹದ ಅಂಗಡಿ ನಡೆಸುತ್ತಿದ್ದ ಒಂದೇ ಕುಟುಂಬದ ಐದು ಜನ ಸೇರಿದ್ದಾರೆ. ಅವರ ಎದುರುಮನೆಯ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ.
ಉಳಿದ ಮೂರು ಜನ ವಾಹನ ಚಾಲಕರು. ಈ ಅವಘಡದಲ್ಲಿ ಮೂರು ಗ್ಯಾಸ್ ಟ್ಯಾಂಕರ್ ಸಿಲುಕಿದ್ದು, ಅದನ್ನು ಚಲಾಯಿಸುತ್ತಿದ್ದ ಚಾಲಕರು ಸಾವನಪ್ಪಿದ್ದಾರೆ. ಇನ್ನೊಂದು ಕಟ್ಟಿಗೆ ಸಾಗಿಸುತ್ತಿದ್ದ ಲಾರಿ ಮಣ್ಣಿನಡಿ ಹೂತು ಬಿದ್ದಿದ್ದು, ಲಾರಿಯಲ್ಲಿದ್ದ ಜಿಪಿಎಸ್’ನಿಂದ ಅದು ಖಚಿತವಾಗಿದೆ. ಆದರೆ, ಲಾರಿ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಅದರಲ್ಲಿ ಎಷ್ಟು ಜನರಿದ್ದರು? ಎಂಬ ಮಾಹಿತಿ ಸಹ ದೊರೆತಿಲ್ಲ. ಮತ್ತೊಂದು ಐಷಾರಾಮಿ ಕಾರು ಸಹ ಗುಡ್ಡದ ಮಣ್ಣಿನಲ್ಲಿ ಸಿಲುಕಿದೆ. ಆ ಕಾರಿನ ಸುಳಿವು ಈವರೆಗೂ ಸಿಕ್ಕಿಲ್ಲ.
ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬoಧಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..
Discussion about this post