ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತವಾದ ಪರಿಣಾಮ ಒಟ್ಟು 3 ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿ ಪಾಲಾಗಿದ್ದು, ಅದರಲ್ಲಿ ಒಂದು ಗ್ಯಾಸ್ ಟ್ಯಾಂಕರಿನಲ್ಲಿ ಅನಿಲ ತುಂಬಿಕೊoಡಿದೆ.
ಆ ಅನಿಲವನ್ನು ಹಂತ ಹಂತವಾಗಿ ಬೇರೆ ವಾಹನಕ್ಕೆ ತುಂಬಿಸುವ ಕೆಲಸ ಶುರುವಾಗಿದೆ. ಅನಿಲ ಸೋರಿಕೆ ಸಾಧ್ಯತೆ ಇರುವುದರಿಂದ ಈ ಭಾಗದಲ್ಲಿ ಬೀಡಿ ಸೇದುವುದು ಸಹ ಅತ್ಯಂತ ಅಪಾಯಕಾರಿ! ಮಂಗಳೂರಿನಿoದ ಆಗಮಿಸಿದ ತಜ್ಞರು ಅಪಘಾತವಾದ ವಾಹನದಲಿದ್ದ ಅನಿಲವನ್ನು ನಿಧಾನವಾಗಿ ಬೇರೆ ವಾಹನಕ್ಕೆ ತುಂಬಿಸಲಿದ್ದು, ಈ ವೇಳೆ ಯಾರೂ ಅಲ್ಲಿಗೆ ತೆರಳದಂತೆ ಜಿಲ್ಲಾಡಳಿತ ಸೂಚಿಸಿದೆ. ಗ್ಯಾಸ್ ಸೋರಿಕೆ ಅಪಾಯ ಇರುವುದರಿಂದ ಸುತ್ತಲಿನ ಮನೆಯಲ್ಲಿ ದೇವರಿಗೆ ದೀಪ ಹಚ್ಚುವುದು ಸಹ ಸರಿಯಲ್ಲ. ಮೇಣದ ಬತ್ತಿ ಉರಿಸುವುದು ಸಹ ಅಪಾಯ ಎಂದು ಜಿಲ್ಲಾಡಳಿತ ಎಚ್ಚರಿಸಿದೆ. ಸುತ್ತಲಿನ ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರ ಮಾಡುವಂತೆ ಜಿಲ್ಲಾಡಳತ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅದಾಗಿಯೂ ಅಲ್ಲಲ್ಲಿ ಜನ ಓಡಾಡುತ್ತಿದ್ದಾರೆ.
ಅಪಘಾತಕ್ಕೆ ಒಳಗಾದ ಗ್ಯಾಸ್ ಟ್ಯಾಂಕರ್’ಗಳು ಭಾರತ್ ಪೆಟ್ರೋಲ್ ಹಾಗೂ ಎಚ್ ಪಿ ಗ್ಯಾಸ್ ಕಂಪನಿಗೆ ಸೇರಿದ್ದಾಗಿದೆ. ಒಂದು ಕಟ್ಟಿಗೆ ಸಾಗಾಟದ ಟ್ರಕ್ ಸಹ ಮಣ್ಣಿನಲ್ಲಿ ಹೂತಿದ್ದು, ಟ್ಯಾಂಕರ್ ಹಾಗೂ ಲಾರಿಯ 3 ಚಾಲಕರು ಶವವಾಗಿದ್ದಾರೆ. ಈವರೆಗೆ 6 ಜನರ ಶವ ದೊರೆತಿದೆ.
Discussion about this post