ಅನ್ನಭಾಗ್ಯ ಯೋಜನೆ ಅಡಿ ಬಿಪಿಎಲ್ ಪಡಿತರ ಕಾರ್ಡ ಹೊಂದಿದವರಿಗೆ 10 ಕೆಜಿ ಅಕ್ಕಿ ಬದಲು ಹಣ ನೀಡುವ ವಿಧಾನವನ್ನು ಈ ತಿಂಗಳಿನಿ0ದ ಸ್ಥಗಿತಗೊಳಿಸಲಾಗುತ್ತಿದೆ. ಫೆಬ್ರವರಿ ತಿಂಗಳಿಗೆ ಅನ್ವಯವಾಗುವಂತೆ ಹಣದ ಬದಲು ಅಕ್ಕಿಯನ್ನು ವಿತರಿಸಲು ಸರ್ಕಾರ ನಿರ್ಧರಿಸಿದೆ.
ರಾಷ್ಟಿಯ ಭದ್ರತಾ ಕಾಯ್ದೆ ಅನ್ವಯ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಲಾಗುತ್ತಿತ್ತು. ಆದರೆ, ಅಕ್ಕಿ ಕೊರತೆ ಹಿನ್ನಲೆ ಸರ್ಕಾರ ಪ್ರತಿ ಕೆಜಿಗೆ 34 ರೂ ದರ ನಿಗದಿಪಡಿಸಿ ಅದನ್ನು ಫಲಾನುಭವಿ ಬ್ಯಾಂಕ್ ಖಾತೆಗೆ ಜಮಾ ಮಾಡಲು ನಿರ್ಧರಿಸಿತ್ತು. ಸದ್ಯ ಅಕ್ಕಿ ಅಭಾವ ಕಡಿಮೆಯಾಗಿದ್ದು, ಮತ್ತೆ ಅಕ್ಕಿಯನ್ನು ನೀಡಲು ನಿರ್ಧರಿಸಲಾಗಿದೆ.
`ಫೆಬ್ರುವರಿ ತಿಂಗಳ ಹೆಚ್ಚುವರಿ 5ಕೆಜಿ ಅಕ್ಕಿಯನ್ನು ಮಾರ್ಚ ತಿಂಗಳ ಪರಿತರ ವಿತರಣೆಯಲ್ಲಿ ಸೇರಿಸಿ ಹಂಚಿಕೆ ಮಾಡಲಾಗುತ್ತಿದ್ದು, ಪಡಿತರ ಕಾರ್ಡ ಹೊಂದಿದ ಕುಟುಂಬದ ಪ್ರತಿ ಸದಸ್ಯರಿಗೆ 15 ಕೆಜಿ ಅಕ್ಕಿಯನ್ನು ನೀಡಲಾಗುವುದು’ ಎಂದು ದಾಂಡೇಲಿ ಆಹಾರ ನಿರೀಕ್ಷಕರ ಕಚೇರಿ ಪ್ರಕಟಣೆ ಹೊರಟಿಸಿದೆ. `ಫಲಾನುಭವಿಗಳು ಬಯೋಮೆಟ್ರಿಕ್ ನೀಡಿ ಅಕ್ಕಿ ಪಡೆಯಬೇಕು. ಅಂಗಡಿಯವರು ಕಡಿಮೆ ಅಕ್ಕಿ ನೀಡಿದಲ್ಲಿ ಆಹಾರ ನಿರೀಕ್ಷಕರಿಗೆ ದೂರು ಸಲ್ಲಿಸಬೇಕು’ ಎಂದು ತಿಳಿಸಲಾಗಿದೆ.